ಮುಂಬೈ: ಬಾಲಿವುಡ್‌ನಿಂದ ದೂರ ಉಳಿದು ಸದ್ಯ ಹಾಲಿವುಡ್ನಲ್ಲಿ ಫುಲ್ ಬ್ಯುಸಿಯಾಗಿರುವ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ 22 ವರ್ಷಗಳಷ್ಟು ಹಳೆಯ ಬಿಕಿನಿ ಫೋಟೋವೊಂದನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಿಯಾಂಕಾ ಅವರು ಅಮೆರಿಕದ ನ್ಯೂಯಾರ್ಕ್‌ನಲ್ಲಿ ರೆಸ್ಟೊರೆಂಟ್ ಉದ್ಯಮದಲ್ಲೂ ತೊಡಗಿಸಿಕೊಂಡಿದ್ದಾರೆ. ಅವರು 2000ನೇ ನವೆಂಬರ್‌ನಲ್ಲಿ ಮಾಲ್ಡೀವ್ಸ್‌ನಲ್ಲಿ ತೆಗೆದಿರುವ ಬೀಚ್ ಹಿನ್ನಲೆಯ ಫೋಟೋ ಒಂದನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಪತ್ನಿ ಪ್ರಿಯಾಂಕಾ ಚಿತ್ರವನ್ನು ಕಂಡ ನಿಕ್ ಜೋನಾಸ್, ಬೆಂಕಿಯ ಎಮೋಜಿ ಬಳಸಿ ಕಾಮೆಂಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ನಟ ರಣವೀರ್ ಸಿಂಗ್ ಸೇರಿದಂತೆ ಅನೇಕರು ಕಾಮೆಂಟ್ ಮಾಡಿದ್ದಾರೆ. ಲಕ್ಷಾಂತರ ಅಭಿಮಾನಿಗಳಿಂದ ಲೈಕ್‌ಗಳೂ ಸಿಕ್ಕಿವೆ. ವಿಶೇಷವೆಂದರೆ, ಈ ಫೋಟೋ ತೆಗೆದ ವರ್ಷದಲ್ಲೇ (2000) ಪ್ರಿಯಾಂಕಾ 'ವಿಶ್ವ ಸುಂದರಿ' ಕಿರೀಟ ಮುಡಿಗೇರಿಸಿಕೊಂಡಿದ್ದರು.
PublicNext
10/06/2022 04:56 pm