ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೂಜಾ ಹೆಗ್ಡೆ ಗೆ ಕ್ಷಮೆ ಕೇಳಿದ ಇಂಡಿಗೋ

ನಟಿ ಪೂಜಾ ಹೆಗ್ಡೆಗೆ ವಿಮಾನದಲ್ಲಿ ಕೆಟ್ಟ ಅನುಭವ ಆಗಿದೆ. ಈ ಬಗ್ಗೆ ಟ್ವಿಟರ್ ನಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ಇಂಡಿಗೋ ವಿಮಾನ ಸೇವೆ ಬಗ್ಗೆ ಕಿಡಿಕಾರಿದ್ದಾರೆ. ಸದ್ಯ ಇದಕ್ಕೆ ಸಂಸ್ಥೆ ಕ್ಷಮೆ ಕೇಳಿದೆ.

ಪೂಜಾ ಹೆಗ್ಡೆ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಬಾಲಿವುಡ್ ಹಾಗೂ ತೆಲುಗು ಸಿನಿಮಾ ಕೆಲಸಗಳನ್ನು ಒಟ್ಟೊಟ್ಟಿಗೆ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಹೀಗಾಗಿ ಅವರಿಗೆ ವಿಮಾನದಲ್ಲಿ ಸಾಕಷ್ಟು ಸುತ್ತಾಟ ನಡೆಸಬೇಕಾಗುತ್ತಿದೆ. ಅವರು ಇತ್ತೀಚೆಗೆ ಇಂಡಿಗೋ ವಿಮಾನದಲ್ಲಿ ಮುಂಬೈನಿಂದ ತೆರಳುತ್ತಿದ್ದರು. ಈ ವೇಳೆ ವಿಮಾನದಲ್ಲಿದ್ದ ಸ್ಟಾಫ್ ಗಳು ಒರಟಾಗಿ ನಡೆದುಕೊಂಡಿದ್ದಾರೆ.

‘ನಿಮ್ಮ ಸಿಬ್ಬಂದಿಗಳು ಎಷ್ಟು ಒರಟಾಗಿ ನಡೆದುಕೊಳ್ಳುತ್ತಾರೆ. ಯಾವುದೇ ಕಾರಣ ಇಲ್ಲದೆ ತುಂಬಾನೇ ಸೊಕ್ಕಿನಿಂದ ನಡೆದುಕೊಂಡಿದ್ದಾರೆ. ಅವರು ಮಾತನಾಡುವ ಟೋನ್ ಬೆದರಿಸುವಂತಿತ್ತು’ ಎಂದು ಬೇಸರ ಹೊರಹಾಕಿದ್ದಾರೆ.

‘ದಯವಿಟ್ಟು ಕ್ಷಮಿಸಿ. ನಿಮ್ಮೊಂದಿಗೆ ನಾವು ಶೀಘ್ರವೇ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತೇವೆ. ಪಿಎನ್ ಆರ್ ಸಂಖ್ಯೆ ಮತ್ತು ನಿಮ್ಮ ದೂರವಾಣಿ ಸಂಖ್ಯೆಯನ್ನು ಕಳುಹಿಸಿ’ ಎಂದು ಇಂಡಿಗೋ ಸಂಸ್ಥೆ ಪೂಜಾ ಹೆಗ್ಡೆ ಟ್ವೀಟ್ ಗೆ ಉತ್ತರಿಸಿದೆ.

Edited By : Nirmala Aralikatti
PublicNext

PublicNext

10/06/2022 02:53 pm

Cinque Terre

60.95 K

Cinque Terre

0

ಸಂಬಂಧಿತ ಸುದ್ದಿ