ಚೆನ್ನೈ: ನಟಿ ನಯನತಾರಾ ತಮ್ಮ ಬಹುಕಾಲದ ಗೆಳೆಯ ಚಿತ್ರ ನಿರ್ಮಾಪಕ, ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ಬುಧವಾರ ( ಜೂ.9) ಮದುವೆಯಾಗಿದ್ದಾರೆ. ಇಲ್ಲಿನ ಮಹಾಬಲಿಪುರಂ ಖಾಸಗಿ ರೆಸಾರ್ಟ್ನಲ್ಲಿ ಅದ್ದೂರಿಯಾಗಿ ವಿವಾಹ ನಡೆಯಿತು ಎಂದು ತಮಿಳುನಾಡು ಮಾಧ್ಯಮಗಳು ವರದಿ ಮಾಡಿವೆ. ಮದುವೆ ಕಾರ್ಯಕ್ರಮಕ್ಕೆ ಸಿನಿಮಾರಂಗದ ಗಣ್ಯರಾದ ನಟ ರಜನಿಕಾಂತ್, ರಾಧಿಕಾ ಶರತ್ ಕುಮಾರ್, ವಸಂತ ರವಿ, ಬಾಲಿವುಡ್ ನಟ ಶಾರೂಖ್ ಖಾನ್ ಆಗಮಿಸಿ ವಧುವರರನ್ನು ಹರಸಿದ್ದಾರೆ.
ಕಾಲಿವುಡ್, ಟಾಲಿವುಡ್ ನ ನಟ, ನಟಿಯರು, ತಂತ್ರಜ್ಞರು ಸೇರಿದಂತೆ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಶುಭಾಶಯಗಳನ್ನು ಕೋರುತ್ತಿದ್ದಾರೆ. 2015ರಲ್ಲಿ ವಿಘ್ನೇಶ್ ನಿರ್ದೇಶನದ ‘ನಾನುಂ ರೌಡಿಧಾನ್’ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ನಯನತಾರಾ ಮತ್ತು ವಿಘ್ನೇಶ್ ಶಿವನ್ ನಡುವೆ ಪ್ರೇಮಾಂಕುರವಾಗಿತ್ತು. ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
PublicNext
09/06/2022 05:19 pm