ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿ ಕಾಶ್ಮೀರ್ ಫೈಲ್ಸ್-2 ಚಿತ್ರ ಬರುತ್ತದೆಯೇ ?

ಮುಂಬೈ: ದಿ ಕಾಶ್ಮೀರ್ ಫೈಲ್ಸ್ ಚಿತ್ರ ಭಾರೀ ಸೌಂಡ್ ಮಾಡಿದೆ. ಕಾಶ್ಮೀರ್ ನಲ್ಲಂತೂ ಈ ಚಿತ್ರ ಕೋಲಾಹಲವನ್ನೇ ಎಬ್ಬಿಸಿದೆ. ಇಂತಹ ಚಿತ್ರ ಹಲವಡೆ ಬ್ಯಾನ್ ಕೂಡ ಆಗಿದೆ. ಆದರೆ, ಈ ಚಿತ್ರದ ಕಥೆ ಒಂದೇ ಭಾಗದಲ್ಲಿ ಮುಗಿಯೋ ಹಾಗೆ ಇಲ್ಲವೇ ಇಲ್ಲ. ಅದಕ್ಕೇನೆ ಪಾರ್ಟ್‌-2 ಬರುತ್ತದೆ ಎಂಬ ಪ್ರಶ್ನೆ ಇದೆ.

ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಬಗ್ಗೆ ಹಲವು ಪ್ರಶ್ನೆಗಳು ಇವೆ. ಇನ್ನು ಹಲವು ಆರೋಪಗಳೂ ಇವೆ. ಅದರ ಮಧ್ಯೆ ಸಿನಿಪ್ರೇಮಿಗಳು ಈಗ ಕಾಶ್ಮೀರ್ ಫೈಲ್ಸ್ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಿಗೆ ದಿ ಕಾಶ್ಮೀರ್ ಫೈಲ್ಸ್ ಪಾರ್ಟ್-2 ಚಿತ್ರ ಬರುತ್ತದೆಯೇ ಅಂತಲೂ ಕ್ವಶ್ಚನ್ ಮಾಡಿದ್ದಾರೆ.

ವಿವೇಕ್ ಅಗ್ನಿಹೋತ್ರಿ ಈ ಬಗ್ಗೆ ಉತ್ತರವನ್ನೂ ಈಗ ಕೊಟ್ಟಿದ್ದು,ಫೈಲ್ಸ್ ಸರಣಿ ಸಿನಿಮಾಗಳನ್ನ ಮಾಡುತ್ತಿದ್ದೇನೆ. ಡೆಲ್ಲಿ ಫೈಲ್ಸ್ ಅಂತಲೂ ಸಿನಿಮಾ ಮಾಡುತ್ತಿದ್ದೇನೆ.ಈ ಸಿನಿಮಾವನ್ನೇ ಮುಂದುವರೆದ ಭಾಗ ಎಂದು ಕೊಳ್ಳಿ ಅಂತಲೇ ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ.

Edited By :
PublicNext

PublicNext

08/06/2022 07:53 pm

Cinque Terre

45.41 K

Cinque Terre

5