ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಕ್ರಂ ಚಿತ್ರದ ಮುಂದೆ ಕೆಜಿಎಫ್ ಚಿತ್ರ ಬಚ್ಚಾ:ಕಿರಿಕ್ ಕ್ರಿಟಿಕ್ ಕಮಾಲ್ ಖಾನ್!

ಬೆಂಗಳೂರು: ಬಾಲಿವುಡ್‌ ಕಮಾಲ್ ಆರ್.ಖಾನ್ ಗೆ ಸದಾ ಸುದ್ದಿಯಲ್ಲಿಯೇ ಇರ್ತಾರೆ. ಇರೋ ಬರೋ ಎಲ್ಲ ಸಿನಿಮಾಗಳನ್ನ ರಿವ್ಯೂ ಮಾಡ್ತಾರೆ. ದೊಡ್ಡ ದೊಡ್ಡ ಸಿನಿಮಾಗಳನ್ನ ಮನಸೋಯಿಚ್ಛೆ ಟೀಕಿಸಿ ಕೆಂಗಣ್ಣಿಗೂ ಗುರಿ ಆಗ್ತಾರೆ. ಅದರಂತೆ, ಯಶ್ ಫ್ಯಾನ್ಸ್ ಕೆಂಗಣ್ಣಿಗೆ ಗುರಿ ಆಗಿದ್ದಾರೆ ಮಿಸ್ಟರ್ ಕಮಾಲ್ ಖಾನ್ .

ಹೌದು.ಕಮಲ್ ಹಾಸನ್ ಅಭಿನದಯ ವಿಕ್ರಂ ಚಿತ್ರ ರಿಲೀಸ್ ಆಗಿದೆ. ಕಮಲ್ ಹಾನಸ್ ಅಂದ್ಮೇಲೆ ಚಿತ್ರಗಳು ಅದ್ಭುತವೇ ಬಿಡಿ. ಇಂತಹ ಚಿತ್ರವನ್ನ ರಿವ್ಯೂ ಮಾಡಿರೋ ಕಮಾಲ್ ಆರ್.ಖಾನ್, ಅದನ್ನ ಕೆಜಿಎಫ್‌-2ಗೂ ಹೋಲಿಕೆ ಮಾಡಿದ್ದಾರೆ.

ವಿಕ್ರಂ ಚಿತ್ರದ ಮುಂದೆ ಕೆಜಿಎಫ್-2 ಬಚ್ಚಾ ಅಂತಲೇ ಕಾಮೆಂಟ್ ಮಾಡಿದ್ದಾರೆ. ಇದರಿಂದ ಕೆರಳಿ ಕೆಂಡವಾದ ಯಶ್ ಫ್ಯಾನ್ಸ್ ಕಮಾಲ್ ಖಾನ್‌ರನ್ನ ತಮ್ಮದೇ ಶೈಲಿಯಲ್ಲಿ ಟೀಕಿಸಿದ್ದಾರೆ. ಕೆಜಿಎಫ್‌-2 ಚಿತ್ರಕ್ಕೆ ಯಾವುದೂ ಸರಿಸಮ ಅಲ್ಲವೇ ಅಲ್ಲ ಅಂತಲೆ ತಿರುಗೇಟು ಕೊಟ್ಟಿದ್ದಾರೆ.

Edited By :
PublicNext

PublicNext

07/06/2022 10:55 pm

Cinque Terre

53.09 K

Cinque Terre

2