ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಂಡೋಸೀಟ್‌ ಒಳಗೆ ಏನೆಲ್ಲ ಇದೆ ಗೊತ್ತೇ ?

ಬೆಂಗಳೂರು:ಕನ್ನಡದ ನಿರೂಪಕಿ,ನಟಿ-ಶೀತಲ್ ಶೆಟ್ಟಿ ನಿರ್ದೇಶನದ ವಿಂಡೋಸೀಟ್‌ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಸಸ್ಪೆನ್ಸ್ ಕಂಟೆಂಟ್ ಇರೋ ಈ ಚಿತ್ರ ತನ್ನ ಈ ಟ್ರೈಲರ್‌ನಲ್ಲಿ ಒಂದಷ್ಟು ಇಂಟ್ರಸ್ಟಿಂಗ್ ವಿಷಯ ಬಿಟ್ಟುಕೊಟ್ಟಿದೆ.

ನಿರೂಪ್ ಭಂಡಾರಿ ಅಭಿನಯದಲ್ಲಿ ಬರ್ತಿರೋ ಈ ಚಿತ್ರದಲ್ಲಿ ನಿರೂಪ್ ಗೆ ನಟಿಯರಾದ ಸಂಜನಾ ಆನಂದ್, ಅಮೃತಾ ಅಯ್ಯರ್ ಸಾಥ್ ಕೊಟ್ಟಿದ್ದಾರೆ. ಖಳನಾಯಕ ನಟ ರವಿಶಂಕರ್ ಈ ಚಿತ್ರದಲ್ಲಿ ವಿಶೇಷ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಸದ್ಯ ಚಿತ್ರದ ಟ್ರೈಲರ್ ಹೆಚ್ಚು ಇಂಟ್ರಸ್ಟಿಂಗ್ ಆಗಿಯೇ ಕಾಣಿಸುತ್ತಿದೆ. ಇಡೀ ಚಿತ್ರ ಮುಂದಿನ ತಿಂಗಳು ಜುಲೈ-1 ರಂದು ಎಲ್ಲೆಡೆ ರಿಲೀಸ್ ಕೂಡ ಆಗುತ್ತಿದೆ.

Edited By :
PublicNext

PublicNext

07/06/2022 09:35 pm

Cinque Terre

85.9 K

Cinque Terre

0