ಮುಂಬೈ: ಬಾಲಿವುಡ್ ನಾಯಕ ನಟ ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಕೇಸ್ ಸಮಯದಲ್ಲಿ ಎಲ್ಲರೂ ಸರ್ಪೋಟ್ ಮಾಡಿದರೋ ಬಿಟ್ಟರೋ ಗೊತ್ತಿಲ್ಲ. ಆದರೆ, ಬಾಲಿವುಡ್ ನ ಒಂದು ಕಾಲದ ನಾಯಕ ನಟ ಹಾಗೂ ರಾಜಕಾರಣಿ ಶತ್ರುಘ್ನ ಸಿನ್ಹಾ, ಆರ್ಯನ್ ಪರವಾಗಿಯೇ ಮಾತನಾಡಿ ಬೆಂಬಲಿಸಿದ್ದರು.
ಈ ಸಂಬಂಧ ನಟ ಶತ್ರುಘ್ನ ಸಿನ್ಹಾ ಈಗ ಮತ್ತೆ ಮಾತನಾಡಿದ್ದಾರೆ.ಆರ್ಯನ್ ಪರವಾಗಿಯೇ ನಾನು ಅಂದು ಮಾತನಾಡಿದ್ದೇನೆ. ಆದರೆ, ಶಾರುಕ್ ಖಾನ್, ಆರ್ಯನ್ ಹೊರ ಬಂದ್ಮೇಲೆ ಒಂದೇ ಒಂದು ಥ್ಯಾಂಕ್ಸ್ ಕೂಡ ಹೇಳಿಲಿಲ್ಲ ಅಂತಲೇ ಈಗ ಹೇಳಿಕೊಂಡಿದ್ದಾರೆ.
ಶಾರುಕ್ ಖಾನ್ ಅಂದು ನನ್ನಿಂದ ಯಾವುದೇ ಬೆಂಬಲ ಕೇಳಿರಲಿಲ್ಲ.ಆದರೂ, ಸಣ್ಣದೊಂದು ಥ್ಯಾಂಕ್ಸ್ ಅನ್ನೂ ಶಾರುಕ್ ಹೇಳಿಲ್ಲ ಅಂತಲೇ ಶತ್ರುಘ್ನ ಸಿನ್ಹಾ ಬೇಸರ ವ್ಯಕ್ತಪಡಿಸಿದ್ದಾರೆ.
PublicNext
07/06/2022 03:08 pm