‘ವಿರಾಟ ಪರ್ವಂ’ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಸಾಯಿ ಪಲ್ಲವಿ, ನಕ್ಸಲೈಟ್ ಹುಡುಗಿಯ ಪಾತ್ರವನ್ನು ಮಾಡಿದ್ದಾರೆ. ಟ್ರೇಲರ್ ನಲ್ಲಿ ಈ ಪಾತ್ರವನ್ನು ಹೈಲೆಟ್ ಮಾಡಿ ತೋರಿಸಿದ್ದು, ಪಲ್ಲವಿ ಫ್ಯಾನ್ಸ್ ಕಸಿವಿಸಿಗೊಂಡಿದ್ದಾರೆ.
ರಾಣಾ ದಗ್ಗುಬಾಟಿ ಈ ಸಿನಿಮಾದ ಹೀರೋ ಆಗಿದ್ದರೂ, ಪಲ್ಲವಿ ಪಾತ್ರಕ್ಕೂ ಅಷ್ಟೇ ಮಹತ್ವ ನೀಡಲಾಗಿದೆಯಂತೆ. ಹಾಗಾಗಿ ಟ್ರೇಲರ್ ತುಂಬಾ ಸಾಯಿ ಪಲ್ಲವಿಯದ್ದೇ ಅಬ್ಬರ. ನಕ್ಸಲ್ ನಾಯಕನ ಪ್ರೀತಿಗೆ ಬಿದ್ದ ಹುಡುಗಿಯೊಬ್ಬಳು, ತಾನೂ ನಕ್ಸಲ್ ಆಗುವ ಕಥೆಯನ್ನು ಈ ಸಿನಿಮಾ ಹೊಂದಿದೆಯಂತೆ. ಹಾಗಾಗಿ ಇಂತಹ ಪಾತ್ರವನ್ನು ನೀವು ಮಾಡಬಾರದು ಎಂದು ಅಭಿಮಾನಿಗಳು ಮನವಿ ಮಾಡಿಕೊಂಡಿದ್ದಾರೆ.
ವಿಭಿನ್ನ ಪಾತ್ರಗಳ ಮೂಲಕವೇ ಈವರೆಗೂ ಗುರುತಿಸಿಕೊಂಡಿರುವ ಸಾಯಿ ಪಲ್ಲವಿ, ಅಭಿಮಾನಿಗಳ ಮಾತಿಗೆ ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ಕೊಟ್ಟಿಲ್ಲ. ಆದರೆ, ಟ್ರೇಲರ್ ಬಗ್ಗೆ ಮಾತನಾಡಿ, ಇದೊಂದು ಭರವಸೆ ತುಂಬುವಂತಹ ಚಿತ್ರ ಎಂದಿದ್ದಾರೆ.
PublicNext
06/06/2022 08:54 pm