ತಮಿಳು ಚಿತ್ರರಂಗದಲ್ಲಿ ಕಳೆದ 6 ತಿಂಗಳಿಂದ ಬಾಕ್ಸ್‌ಫೀಸ್‌ನಲ್ಲಿ ಬಿಗ್ ಬಜೆಟ್ ಸಿನಿಮಾಗಳು ಹೇಳಿಕೊಳ್ಳುವಂತಹ ಸಾಧನೆಯನ್ನೇನು ಮಾಡಿರಲಿಲ್ಲ. ಈಗ ಕಮಲ್ ಹಾಸನ್ ಸಿನಿಮಾ 'ವಿಕ್ರಂ' ಕಾಲಿವುಡ್‌ಗೆ ಹೊಸ ಹುರುಪು ನೀಡುತ್ತಿದೆ.
ಲೋಕೇಶ್ ಕನಗರಾಜ್ ನಿರ್ದೇಶಿಸಿದ 'ವಿಕ್ರಂ' ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಿದೆ. ಈ ಸಿನಿಮಾ ಭಾರತದ ಜೊತೆ ಜೊತೆಗೆ, ವಿದೇಶದಲ್ಲೂ ಉತ್ತರ ರೆಸ್ಪಾನ್ಸ್ ಸಿಕ್ಕಿದೆ. ಕೇವಲ ಮೂರು ದಿನಗಳಲ್ಲಿಯೇ ಸಿನಿಮಾದ ಗಳಿಕೆ 150 ಕೋಟಿ ರೂ. ಕಲೆಕ್ಷನ್ ಮಾಡಿದೆ. ಒಂದು ಲೆಕ್ಕಾಚಾರದ ಪ್ರಕಾರ, 'ವಿಕ್ರಂ' ವಿಜಯಯಾತ್ರೆ ಹೀಗೆ ಮುಂದುವರೆದರೆ, ಅವರ ಕರಿಯರ್‌ನಲ್ಲಿಯೇ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಇದಾಗಲಿದೆ ಎಂದು ಹೇಳಲಾಗುತ್ತಿದೆ.
ಮೊದಲನೇ ದಿನ 58 ಕೋಟಿ ರೂ.
ಎರಡನೇ ದಿನ 44 ಕೋಟಿ ರೂ.
ಮೂರನೇ ದಿನ 48.28 ಕೋಟಿ ರೂ.
ಒಟ್ಟು 150.28 ಕೋಟಿ ರೂ.
PublicNext
06/06/2022 05:46 pm