ಅಬು ದಾಬಿ: ಬಾಲಿವುಡ್‌ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಗೂ ಕೆಟ್ಟ ದಿನಳು ಶುರು ಆಗಿದ್ದವು. ಯಾವುದೇ ಸಿನಿಮಾ ಕೂಡ ಅಂದು ಯಶಸ್ಸು ಕಂಡಿರಲಿಲ್ಲ. ಆಗ ನಿರ್ಮಾಪಕ ಬೋನಿ ಕಪೂರ್ ಈ ನಾಯಕನಿಗೆ ಒಂದು ಸಿನಿಮಾ ಕೊಟ್ಟರು. ಅದುವೇ "ವಾಂಟೆಡ್" ಹೆಸರಿನ ಚಿತ್ರ. ಈ ಚಿತ್ರದ ಸಕ್ಸಸ್ ಮೂಲಕ ಸಲ್ಮಾನ್ ಖಾನ್ ಕಮ್ ಬ್ಯಾಕ್ ಮಾಡಿದರು.
ಈ ಸತ್ಯವನ್ನ ಸ್ವತಃ ಸಲ್ಮಾನ್ ಖಾನ್, ಅಬು ದಾಬಿಯಲ್ಲಿ ನಡೆದ ಇಂಟರ್‌ನ್ಯಾಷನಲ್ ಇಂಡಿಯನ್ ಫಿಲ್ಮಂ ಅಕಾಡೆಮಿ ಅವಾರ್ಡ್ ಫಂಕ್ಷನ್ ನಲ್ಲಿ ಹೇಳಿಕೊಂಡಿದ್ದಾರೆ. ತಮ್ಮ ಇಡೀ ಕರಿಯರ್ ನಲ್ಲಿ ಬೋನಿ ಕಪೂರ್ ಸಾಕಷ್ಟು ಸಹಾಯ ಮಾಡಿದ್ದಾರೆ ಎಂದೂ ಸಲ್ಲು ನೆನಪಿಸಿಕೊಂಡಿದ್ದಾರೆ.
ಹಾಗೇನೆ ನನ್ನ ಕೆಟ್ಟ ಟೈಮ್ ನಲ್ಲಿ ಬೋನಿ ಕಪೂರ್ ನನಗಾಗಿಯೆ "ವಾಂಟೆಡ್" ಸಿನಿಮಾ ಮಾಡಿದ್ದರು. ಈ ಚಿತ್ರದ ಗೆಲುವು ನನಗೆ ಕಮ್ ಬ್ಯಾಕ್ ಮಾಡಲು ನೆರವಾಯಿತು ಎಂದು ಸಲ್ಮಾನ್ ಖಾನ್ ಹೇಳಿಕೊಂಡಿದ್ದಾರೆ. ಪ್ರಭು ದೇವಾ ಈ ಚಿತ್ರವನ್ನ ಡೈರೆಕ್ಟ್ ಮಾಡಿದ್ದಾರೆ. 2009 ರಲ್ಲಿ ಈ ಚಿತ್ರ ರಿಲೀಸ್ ತೆರೆಕಂಡಿತ್ತು.
PublicNext
06/06/2022 02:08 pm