ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಪ್ಪಿ ಚಿತ್ರದ ಟೈಟಲ್‌ಗೆ ಅಪ್ಪು ಬಾಲ್ಯದ ಫೋಟೋ ಸ್ಫೂರ್ತಿನೇ?

ಬೆಂಗಳೂರು:ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಹೊಸ ಚಿತ್ರದ ಟೈಟಲ್ ಮಜವಾಗಿಯೇ ಇದೆ. ಆದರೆ, ಇದಕ್ಕೆ ಪವರ್ ಸ್ಟಾರ್ ಪುನೀತ್ ಅವರ ಬಾಲ್ಯದ ಆ ನಾಮಧಾರಿ ಫೋಟೋ ಸ್ಫೂರ್ತಿ ಆಗಿದಿಯೇ ? ಬನ್ನಿ, ಹೇಳ್ತಿವಿ.

ಉಪೇಂದ್ರ ಅಭಿನಯದ ಹೊಸ ಚಿತ್ರದ ಟೈಟಲ್ ಕಂಡ ಜನ, ತಮ್ಮದೇ ರೀತಿಯಲ್ಲಿ ಅರ್ಥ ಕಲ್ಪಿಸಿಕೊಳ್ಳುತ್ತಿದ್ದಾರೆ. ಉಪ್ಪಿ ಇದರ ಬಗ್ಗೆ ಏನ್ ಹೇಳ್ತಾರೆ ಅನ್ನೋ ಕುತೂಹಲವೂ ಎಂದಿನಂತೆ ಇದ್ದೇ ಇದೆ.

ಹೌದು.ಉಪ್ಪಿ ಇಂದು ಚಿತ್ರದ ಮುಹೂರ್ತ ಬಳಿಕ ಮಾಧ್ಯಮದ ಮುಂದೆ ಮಾತನಾಡಿದ್ದಾರೆ. ಆಗಲೇ ಒಬ್ಬ ಅಭಿಮಾನಿ ಬಂದು ಅಪ್ಪುವಿನ ಬಾಲ್ಯದ ಫೋಟೋ ತೋರಿಸಿದ್ದಾರೆ.

ಆಗ ರಿಯಲ್ ಸ್ಟಾರ್ ಉಪ್ಪಿ ಅದನ್ನ ನೋಡಿ, ಫುಲ್ ಖುಷ್ ಆಗಿದ್ದಲ್ಲದೇ , ನೋಡಿ ಇವರೇ ನಮ್ಮ ಗಾಡ್, ದೇವತಾ ಮನುಷ್ಯ, ನಾವು ಅವರನ್ನ ಕಳೆದುಕೊಂಡಿಲ್ಲ. ನಾವು ಅವರನ್ನ ಯಾವತ್ತು ಕಳೆದುಕೊಳ್ಳೋದಿಲ್ಲ ಅಂತ ಹೇಳಿ ಟೈಟಲ್ ಬಗ್ಗೆ ಮತ್ತಷ್ಟು ಕುತೂಹಲ ಕೆರಳಿಸಿದ್ದಾರೆ.

Edited By :
PublicNext

PublicNext

03/06/2022 05:31 pm

Cinque Terre

32.12 K

Cinque Terre

0