ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಮತ್ತು ನಿರ್ದೇಶನದ ಹೊಸ ಚಿತ್ರಕ್ಕೆ ಮುಹೂರ್ತ ಆಗಿದೆ. ಉಪ್ಪಿಯ ಮೊದಲ ದೃಶ್ಯಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕ್ಲಾಪ್ ಮಾಡಿ ಶುಭ ಕೋರಿದ್ದಾರೆ.
ಶುಭ ಶುಕ್ರವಾರದ ಈ ದಿನದಂದು ಇಲ್ಲಿಯ ಬಂಡಿ ಮಹಾಕಾಳಮ್ಮ ದೇವಸ್ಥಾನದಲ್ಲಿ ಉಪ್ಪಿಯ ವಿಭಿನ್ನ ಟೈಟಲ್ ನ ಚಿತ್ರ ಲಾಂಚ್ ಆಗಿದ್ದು, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ಡಾಲಿ ಧನಂಜಯ್ ಹೀಗೆ ಕನ್ನಡದ ಎಲ್ಲ ತಾರೆಯರು ಬಂದು ವಿಶ್ ಮಾಡಿದ್ದಾರೆ.
ವಿಶೇಷವೆಂದ್ರೆ ಕೇಸರಿ ಬಣ್ಣದ ಉಡುಗೆ ತೊಟ್ಟು ಬಂದಿದ್ದ ಉಪ್ಪಿ, ತಮ್ಮ ಹಣೆ ಮೇಲೆ ನಾಮ ಹಾಕಿಕೊಂಡು ಗಮನ ಸೆಳೆದರು. ಈ ನಾಮವೇ ಚಿತ್ರದ ಶೀರ್ಷಿಕೆನೂ ಆದಂತಿದೆ ಅನ್ನೋದಕ್ಕೆ ಈಗಾಗಲೇ ರಿಲೀಸ್ ಆದ ಪೋಸ್ಟರ್‌ಗಳು ಹೇಳುತ್ತಿವೆ.
ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಹಾಗೂ ಲಹರಿ ಸಂಸ್ಥೆ ಜಂಟಿಯಾಗಿ ಈ ಚಿತ್ರವನ್ನ ನಿರ್ಮಿಸುತ್ತಿದ್ದು,ಚಿತ್ರದ ಮುಹೂರ್ತದ ವೇಳೆ ಕೆ.ಪಿ.ಶ್ರೀಕಾಂತ್ ಕೂಡ ನಾಮ ಧರಿಸಿಕೊಂಡು ಗಮನ ಸೆಳೆದರು.
-ರೇವನ್ ಪಿ.ಜೇವೂರ್,ಎಂಟರಟೈನಮೆಂಟ್ ಬ್ಯೂರೋ,ಪಬ್ಲಿಕ್ ನೆಕ್ಸ್ಟ್
PublicNext
03/06/2022 02:30 pm