ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತೊಮ್ಮೆ ಡೈರೆಕ್ಟರ್ ಎಸ್.ಎಸ್.ರಾಜಮೌಳಿ ಅವರೊಟ್ಟಿಗೆ ಸಿನಿಮಾ ಮಾಡ್ತಿದ್ದಾರೆ. ಕಥೆಗಾರ ಹಾಗೂ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಹೇಳಿರೋ ಕಥೆಯನ್ನೂ ಈಗ ಕೇಳಿ ಬಂದಿದ್ದಾರೆ.
ಡೈರೆಕ್ಟರ್ ರಾಜಮೌಳಿ ಅವರ ಸೂಚನೆ ಮೇರೆಗೆ ಕಿಚ್ಚ ಸುದೀಪ್ ಈಗಾಗಲೇ ಹೈದ್ರಾಬಾದ್ ಗೂ ಹೋಗಿ ಬಂದಿದ್ದಾರೆ. ಕಥೆಗಾರ ವಿಜಯೇಂದ್ರ ಪ್ರಸಾದ್ ಹೇಳಿರೋ ಕಥೆಯನ್ನ ಕೇಳಿದ್ದಾರೆ.
ಆದರೆ ಈ ಕಥೆಯನ್ನ ಯಾರಿಗೋಸ್ಕರ ಮಾಡಿದ್ದಾರೆ ಅನ್ನೋದು ಮಾತ್ರ ಸಸ್ಪೆನ್ಸ್ ಆಗಿಯೇ ಇದೆ. ಯಾಕೆಂದ್ರೆ, ಸುದೀಪ್ ಜೊತೆಗೆ ರಾಜಮೌಳಿ ಅವ್ರು ಸಿನಿಮಾ ಮಾಡ್ತಾರೆ ಅನ್ನೋ ಸುದ್ದಿ ಇದ್ದೇ ಇದೆ. ಅದು ಇದೇ ಕಥೇನಾ ಅನ್ನೋದು ಗೊತ್ತಿಲ್ಲ. ಆದರೆ,ಸುದೀಪ್ ಕಥೆ ಕೇಳಿ ಬಂದಿರೋದು ಈಗ ಭಾರೀ ಸುದ್ದಿ ಆಗಿದೆ.
PublicNext
02/06/2022 02:31 pm