ನವದೆಹಲಿ: ನಮ್ಮ ಮಕ್ಕಳು ಓದು ಪಠ್ಯದಲ್ಲಿ ನಮ್ಮ ರಾಜರಿಗೆ ಅವಕಾಶವೇ ಇಲ್ಲ. ಇಲ್ಲಿರೋದೆಲ್ಲ ದಾಳಿಕೋರ ಮೊಘಲ ರಾಜ ಕಥೆಗಳೇ ಪಠ್ಯದಲ್ಲಿವೆ ಎಂದು ಪೃಥ್ವಿರಾಜ್ ಚಿತ್ರದ ನಾಯಕ ಅಕ್ಷಯ್ ಕುಮಾರ್ ಅಸಮಾಧಾನ ಹೊರ ಹಾಕಿದ್ದಾರೆ.
ನಾಳೆ ರಿಲೀಸ್ ಆಗುತ್ತಿರೋ ಪೃಥ್ವಿರಾಜ್ ಚಿತ್ರದ ಕುರಿತು ಅಕ್ಷಯ್ ಮಾತನಾಡಿದ್ದು, ನಮ್ಮ ಮಕ್ಕಳು ಓದುವ ಪಠ್ಯಗಳಲ್ಲಿ ಪೃಥ್ವಿರಾಜ್ ಚೌಹಾಣ್‌ಬಗ್ಗೆ ಎರಡರಿಂದ ಮೂರು ಸಾಲು ಇರೋದು ದುರಂತ ಅಂತಲೇ ಅಕ್ಷಯ್ ಹೇಳಿಕೊಂಡಿದ್ದಾರೆ.
ಆದರೆ, ದಾಳಿ ಮಾಡಿರೋರ ಬಗ್ಗೆ ಇತಿಹಾಸದ ಪಠ್ಯದಲ್ಲಿ ಹೇರಳವಾಗಿಯೇ ಬರೆಯಲಾಗಿದೆ. ನಮ್ಮ ರಾಜರ ಬಗ್ಗೆ ಬರೆಯೋರು ಯಾರೂ ಇಲ್ಲವೇ ಅಂತಲೇ ಅಕ್ಷಯ್ ಪ್ರಶ್ನೆ ಮಾಡಿದ್ದಾರೆ. ನಾವು ಮೊಘಲರ ಬಗ್ಗೆ ತಿಳಿದುಕೊಳ್ಳಬೇಕು. ನಮ್ಮ ರಾಜರ ಬಗ್ಗೆನೂ ತಿಳಿದುಕೊಳ್ಳಲೇಬೇಕು. ಎರಡೂ ಸಮಾನವಾಗಿರಬೇಕು ಎಂದು ಅಕ್ಷಯ್ ಕುಮಾರ್ ಶಿಕ್ಷಣ ಸಚಿವರಲ್ಲಿ ಮನವಿ ಮಾಡಿದ್ದಾರೆ.
PublicNext
02/06/2022 11:14 am