ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಣ್ಣದ ಲೋಕದ ಕನಸುಗಾರನ ಬರ್ತ್ ಡೇ ಕ್ಷಣಗಳು !

ಬೆಂಗಳೂರು: ಕ್ರೇಜಿ ಸ್ಟಾರ್ ರವಿಚಂದ್ರನ್ ಮೊನ್ನೆ 30 ರಂದು ತಮ್ಮ 60 ನೇ ಜನ್ಮ ದಿನ ಆಚರಿಸಿಕೊಂಡ್ರು. ಕ್ರೇಜಿ ಸ್ಟಾರ್ ಜನ್ಮ ದಿನದ ಆ ಕ್ಷಣ ನಿಜಕ್ಕೂ ಅದ್ಭುತವಾಗಿಯೇ ಇತ್ತು. ಸೆಲೆಬ್ರಿಟಿಗಳು ಮನೆಗೆ ಬಂದು ಮನಸಾರೆ ಕನಸುಗಾರನಿಗೆ ಜನ್ಮ ದಿನದ ಶುಭಾಶಯ ತಿಳಿಸಿದರು.

ರವಿಚಂದ್ರನ್ ಜನ್ಮ ದಿನದ ಆ ಸಂಭ್ರಮದಲ್ಲಿ ನಟಿ ಶೃತಿ, ನಟ ಶರಣ್ ಸೇರಿದಂತೆ ಅನೇಕರು ಬಂದಿದ್ದರು. ಮಕ್ಕಳಾದ ಮನೋರಂಜನ್ ಮತ್ತು ವಿಕ್ರಮ್ ಕೂಡ ಅಪ್ಪನ ಜನ್ಮ ದಿನವನ್ನ ಸೆಲೆಬ್ರೇಟ್ ಮಾಡಿದರು.

ಕನಸುಗಳೇ ಜೀವಿಸೋ ಕನಸುಗಾರನ ಜನ್ಮ ದಿನವನ್ನ ಅಷ್ಟೇ ಅಚ್ಚುಕಟ್ಟಾಗಿಯೇ ಚಿತ್ರೀಕರಿಸಲಾಗಿದೆ. ಈ ಒಂದು ಕೆಲಸವನ್ನ ಸಿನಿಮಾರಂಗದ ಸ್ನೇಹಿತರೇ ಮಾಡಿದ್ದಾರೆ. ಅವರೇ ಪಬ್ಲಿಕ್ ನೆಕ್ಸ್ಟ್‌ ಜೊತೆಗೆ ಹಂಚಿಕೊಂಡಿದ್ದಾರೆ.

-ರೇವನ್ ಪಿ.ಜೇವೂರ್,ಎಂಟರಟೈನಮೆಂಟ್ ಬ್ಯೂರೋ,ಪಬ್ಲಿಕ್ ನೆಕ್ಸ್ಟ್

Edited By :
PublicNext

PublicNext

01/06/2022 05:28 pm

Cinque Terre

59.55 K

Cinque Terre

0