ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧನಂಜಯ್ ನಟನೆಯ 'ಜಮಾಲಿಗುಡ್ಡ' ರಿಲೀಸ್ ಡೇಟ್‌ ಫಿಕ್ಸ್‌

ಬೆಂಗಳೂರು: ಡಾಲಿ ಧನಂಜಯ್ ನಟನೆಯ 'Once Upon A Time ಜಮಾಲಿಗುಡ್ಡ' ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸಿನಿಮಾವನ್ನು ಸೆ.9ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಸದ್ಯ ಕನ್ನಡ ಚಿತ್ರರಂಗದ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಲ್ಲಿ ಬಿಝಿಯಾಗಿರುವ ನಟರ ಪೈಕಿ ಡಾಲಿ ಧನಂಜಯ್ ಕೂಡಾ ಒಬ್ಬರು. ಒಂದರ ಮೆಲೊಂದು ಸಿನಿಮಾ ಮಾಡುತ್ತಿರುವ ಧನಂಜಯ್ ಇದೀಗ 'ಜಮಾಲಿಗುಡ್ಡ'ದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ.

ಕುಶಾಲ್ ಗೌಡ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಒನ್ಸ್‌ ಅಪಾನ ಟೈಂ ಇನ್‌ ಜಮಾಲಿ ಗುಡ್ಡ' 80-90ರ ದಶಕದ ಕಥೆಯನ್ನು ಆಧರಿಸಿದ್ದು, ಚಿತ್ರದಲ್ಲಿ ಬಾರ್‌ ಸಪ್ಲಾಯರ್ ಪಾತ್ರದಲ್ಲಿ ಧನಂಜಯ್ ಕಾಣಿಸಿಕೊಂಡಿದ್ದಾರೆ. ಅದಿತಿ ಪ್ರಭುದೇವಾ ನಾಯಕಿಯಾಗಿದ್ದು, ಮಸಾಜ್ ಪಾರ್ಲರ್‌ನಲ್ಲಿ ಕೆಲಸ ಮಾಡುವ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಪ್ರಕಾಶ್‌ ಬೆಳವಾಡಿ, ಭಾವನಾ ರಾಮಣ್ಣ, ತ್ರಿವೇಣಿ ರಾವ್‌, ನಂದಗೋಪಾಲ್‌, ಯಶ್ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

Edited By : Vijay Kumar
PublicNext

PublicNext

30/05/2022 03:43 pm

Cinque Terre

29.93 K

Cinque Terre

1