ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಂಬಿಗೆ ಇಂದು 70ನೇ ಹುಟ್ಟು ಹಬ್ಬ : ಕವನ ಬರೆದ ಸುಮಲತಾ ಅಂಬರೀಶ್

ಇಂದು ರೆಬಲ್ ಸ್ಟಾರ್ ಅಂಬರೀಶ್ ಅವರಿಗೆ 70ನೇ ಹುಟ್ಟುಹಬ್ಬ. ರಾಜ್ಯಾದ್ಯಂತ ಅಂಬಿ ಹುಟ್ಟು ಹಬ್ಬವನ್ನು ಅಭಿಮಾನಿಗಳು ಆಚರಿಸುತ್ತಿದ್ದಾರೆ.

ಇಂದು ಬೆಳಿಗ್ಗೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಸಮಾಧಿಗೆ ಪೂಜೆ ಸಲ್ಲಿಸುವುದರ ಮೂಲಕ ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್, ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ ನಮನ ಸಲ್ಲಿಸಿದರು. ನಂತರ ಅಂಬರೀಶ್ ಅವರ ಹುಟ್ಟೂರಿಗೂ ಸುಮಲತಾ ಅಂಬರೀಶ್ ತೆರಳಿದರು.

ಅಂಬರೀಶ್ ಅವರನ್ನು ಆಕಾಶಕ್ಕೆ ಹೋಲಿಸಿರುವ ಸುಮಲತಾ ಅಂಬರೀಶ್, ಆಕಾಶಕ್ಕೆ ಅಳತೆಯ ಮಿತಿ ಹೇಗಿಲ್ಲವೋ, ಹಾಗೆಯೇ ಅಂಬರೀಶ್ ಅವರ ಪ್ರೀತಿಗೆ ಯಾವುದೇ ಮಿತಿ ಇರಲಿಲ್ಲ. ಹಾಗಾಗಿ ಅವರು ಆಕಾಶದ ಒಡೆಯ ಅನಿಸಿಕೊಂಡಿದ್ದರು. ನೀವು ನನ್ನಲ್ಲಿ ಅಸಂಖ್ಯಾತ ನೆನಪುಗಳನ್ನು ಬಿಟ್ಟು ಹೋಗಿದ್ದೀರಿ. ಈ ಜೀವನಕ್ಕೆ ಸಾಕಾಗಷ್ಟು ಪ್ರೀತಿ ಕೊಟ್ಟಿದ್ದೀರಿ. 70 ವಯಸ್ಸು ಅನ್ನುವುದು ಅಂಬಿ ಎಂಬ ಮೇರು ವ್ಯಕ್ತಿತ್ವದ ಮುಂದೆ ಸಣ್ಣ ಸಂಖ್ಯೆ. ನೀವು ನಮ್ಮಲ್ಲಿ ಶಾಶ್ವತವಾಗಿ ಇರುವುದರಿಂದ ವಯಸ್ಸು ಎನ್ನುವುದು ಕೇವಲ ಸಂಖ್ಯೆ. ಅಂಬಿ ಅಮರ’ ಎಂದು ಭಾವುಕರಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

Edited By : Nirmala Aralikatti
PublicNext

PublicNext

29/05/2022 11:15 am

Cinque Terre

26.56 K

Cinque Terre

3