ಮೈಸೂರು: ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಸದ್ಯ ಬ್ಯಾಡ್ ಮ್ಯಾನರ್ಸ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಇದೇ ವೇಳೆನೆ ಟಗರು ಚಿತ್ರ ಖ್ಯಾತಿಯ ನಟ ಡಾಲಿ ಧನಂಜಯ್ ಶೂಟಿಂಗ್ ಸ್ಪಾಟ್ ಗೆ ವಿಜಿಟ್ ಮಾಡಿದ್ದಾರೆ.
ಹೌದು. ಬ್ಯಾಡ್ ಮ್ಯಾನರ್ಸ್ ಚಿತ್ರದ ನಿರ್ದೇಶಕ ಬೇರೆ ಯಾರೋ ಅಲ್ಲ. ಅದು ಸುಕ್ಕ ಸೂರಿ. ಈ ಸೂರಿಯವರ ಗರಡಿಯಲ್ಲಿಯೇ ಅಭಿಷೇಕ್ ಅಂಬರೀಶ್ ಈಗ ಪಳಗುತ್ತಿದ್ದಾರೆ. ಅದೇ ವರ್ಕಿಂಗ್ ಮೂಡ್ ನಲ್ಲಿರೋವಾಗ್ಲೇ, ಸೂರಿಗಾಗಿ ಟಗರು ಚಿತ್ರದಲ್ಲಿ ಕೆಲಸ ಮಾಡಿದ್ದ ಡಾಲಿ ಧನಂಜಯ್ ಇಲ್ಲಿ ಬಂದೇ ಬಿಟ್ಟರು.
ಬ್ಯಾಡ್ ಮ್ಯಾನರ್ಸ್ ಚಿತ್ರದ ಚಿತ್ರೀಕರಣ ಸದ್ಯ ಮೈಸೂರಿನಲ್ಲಿ ನಡೀತಾ ಇದೆ. ಈ ವೇಳೆನೆ ಧನಂಜಯ್ ಇಡೀ ಟೀಮ್ ಅನ್ನ ಮೀಟ್ ಆಗಿದ್ದಾರೆ. ಅಮೂಲ್ಯವಾದ ಟೈಮ್ ಅನ್ನು ಟೀಮ್ ಜೊತೆಗೆ ಡಾಲಿ ಧನಂಜಯ್ ಕಳೆದಿದ್ದಾರೆ.
-ರೇವನ್ ಪಿ.ಜೇವೂರ್,ಎಂಟರಟೈನಮೆಂಟ್ ಬ್ಯೂರೋ,ಪಬ್ಲಿಕ್ ನೆಕ್ಸ್ಟ್
PublicNext
27/05/2022 05:50 pm