ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಬಾಲಿವುಡ್ ನಲ್ಲಿ ಭಾರೀ ಸುದ್ದಿ ಮಾಡ್ತಾನೇ ಇದೆ. ಟ್ರೇಡ್ ಸರ್ಕಲ್ ನಲ್ಲೂ ಈ ಚಿತ್ರದ ಬಗ್ಗೆ ಚರ್ಚೆ ನಡೆದಿದೆ. ಇಂತಹ ಸಮಯದಲ್ಲಿಯೇ ಅಜಯ್ ದೇವಗನ್ ಅಭಿನಯದ Thank God ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿರೋದು ವಿಕ್ರಾಂತ್ ರೋಣನ Buzz ನ ಖದರ್ ಬಿಚ್ಚಿಟಿದೆ.
ವಿಕ್ರಾಂತ್ ರೋಣ ಚಿತ್ರದ ನಾಯಕ ಕಿಚ್ಚ ಸುದೀಪ್ ಹಾಗೂ ಅಜಯ್ ದೇವಗನ್ ಭಾಷಾ ವಿಚಾರವಾಗಿಯೇ ಟ್ವಿಟರ್ ನಲ್ಲಿ ಕಿತ್ತಾಡಿಕೊಂಡಿದ್ದೇ ಗೊತ್ತೇ ಇದೆ.
ಆದರೆ, ಬಾಕ್ಸ್ ಆಫೀಸ್ ನಲ್ಲೂ ಆ ಕ್ಲಾಶ್ ಆಗಲೇ ಬಾರದು ಅಂತಲೇ ಅಜಯ್ ದೇವಗನ್ ಅಭಿನಯದ Thank God ಸಿನಿಮಾ ಜುಲೈ-29 ರಂದು ರಿಲೀಸ್ ಆಗದೇ ಮುಂದಕ್ಕೆ ಹೋಗಿದೆ. ಜುಲೈ-28ಕ್ಕೆ ವಿಕ್ರಾಂತ್ ರೋಣ ಬಹು ಭಾಷೆಯಲ್ಲಿ ಅಬ್ಬರಿಸಲು ಈಗಲೇ ಸಜ್ಜಾಗಿ ಬಿಟ್ಟಿದೆ.
-ರೇವನ್ ಪಿ.ಜೇವೂರ್,ಎಂಟರಟೈನಮೆಂಟ್ ಬ್ಯೂರೋ,ಪಬ್ಲಿಕ್ ನೆಕ್ಸ್ಟ್
PublicNext
27/05/2022 02:49 pm