ಚೆನ್ನೈ: ಕಾಲಿವುಡ್ ಸೂಪರ್ ಸ್ಟಾರ್ ಕಮಲ್ ಹಾಸನ್ ಈಗೊಂದು ಹೇಳಿಕೆ ಕೊಟ್ಟಿದ್ದಾರೆ. ಆ ಹೇಳಿಕೆ ಈಗ ಭಾರೀ ಗಮನ ಸೆಳೆಯುತ್ತಿದೆ. ವಿಶೇಷವೆಂದ್ರು ಈ ಹೇಳಿಕೆ ಸೂಪರ್ ಸ್ಟಾರ್ ರಜನಿಕಾಂತ್ ಬಗ್ಗೇನೆ ಇದೆ.
ರಜನಿಕಾಂತ್ ಮತ್ತು ಕಮಲ್ ಹಾಸನ್ ಇಬ್ಬರೂ ಸೂಪರ್ ಸ್ಟಾರಗಳೇ.ಆದರೆ, ಪೈಪೋಟಿ ಅಂತ ಬಂದ್ರೆ, ಇಬ್ಬರಿಗೂ ಬೇರೆ ಯಾರೂ ಸಾಟಿ ಇಲ್ಲ. ಆದರೂ, ಇವರ ಮಧ್ಯೆ ಜಗಳವೇ ಇಲ್ಲ. ಇದ್ದಿರೋದು ಕೇವಲ ಒಳ್ಳೆ ಸ್ನೇಹ ಮಾತ್ರ.
ಇಂತಹ ಸ್ನೇಹಿತರಲ್ಲಿ ರಾಜಕೀಯ ಅಂತ ಬಂದ್ರೆ, ಇಬ್ಬರ ನಿಲುವು ಬೇರೆ ಬೇರೆನೆ ಇರುತ್ತದೆ. ಆ ಸತ್ಯವನ್ನ ಕಮಲ್ ಹಾಸನ್ ಈಗ ವಿಕ್ರಮ್ ಚಿತ್ರದ ಟ್ರೈಲರ್ ರಿಲೀಸ್ ವೇಳೆ ಹೇಳಿಕೊಂಡಿದ್ದಾರೆ.
ನಾನು ಮತ್ತು ರಜನಿಕಾಂತ್ ಇಬ್ಬರೂ ಒಳ್ಳೆ ಸ್ನೇಹಿತರೇ ಆಗಿದ್ದೇವೆ. ಆದರೆ, ರಾಜಕೀಯ ಅಂತ ಬಂದ್ರೆ, ಇಬ್ಬರ ನಿಲುವು ಬೇರೆನೆ ಇದೆ. ಆದರೂ ನಾವು ಗುಡ್ ಫ್ರೆಂಡ್ಸ್. ಅವರು ಈ ದಿನ ಇಲ್ಲಿಗೆ ಬರಲು ಆಗಲಿಲ್ಲ. ಆದರೆ, ರಜನಿಕಾಂತ್ ವಿಶ್ ತಿಳಿಸಿದ್ದಾರೆ ಎಂದು ಕಮಲ್ ಹೇಳಿದ್ದಾರೆ.
PublicNext
27/05/2022 11:56 am