ಶಿರಸಿ: 'ಕನ್ನಡದ ನಟಿಯೊಬ್ಬಳು ನನಗೆ ಮಂಚಕ್ಕೆ ಕರೆದಿದ್ದಳು. ಅವಕಾಶಕ್ಕಾಗಿ ಮಂಚ ಏರೋದು ಕನ್ನಡದಲ್ಲಿ ಕಾಮನ್. ನಾನು ಕನ್ನಡದ ಸಹವಾಸ ಬೇಡ ಎಂದು ಓಡಿ ಬಂದೆ' ಎಂದು ತೆಲುಗು ಸಿನಿಮಾ ನಿರ್ದೇಶಕ ಗೀತಕೃಷ್ಣ ಇತ್ತೀಚೆಗೆ ಹೇಳಿಕೆ ನೀಡಿದ್ದರು.
ನಂತರ ಈ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಂಡು ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಆಗ ಉಲ್ಟಾ ಹೊಡೆದ ನಿರ್ದೇಶಕ ಗೀತಕೃಷ್ಣ, ನಾನು ಎಲ್ಲ ಸಿನಿಮಾ ರಂಗದಲ್ಲಿರುವ ಕೊಳಕು ಮನಸ್ಥಿತಿಯ ಬಗ್ಗೆಯಷ್ಟೇ ಮಾತನಾಡಿದ್ದು ಎಂದು ವಿವಾದದ ಮೇಲೆ ತೇಪೆ ಹಚ್ಚಲು ಮುಂದಾಗಿದ್ದರು.
ಈ ಬಗ್ಗೆ ಶಿರಸಿಯಲ್ಲಿ ಪ್ರತಿಕ್ರಿಯೆ ನೀಡಿರುವ ನಟ ಶಿವರಾಜ್‌ಕುಮಾರ್, ಯಾರೋ ಏನೋ ಹೇಳಿದರು ಅಂತಾ ಕೇಳೋದು ಬೇಡ. ಕನ್ನಡ ಸಿನಿಮಾ ಇಂಡಸ್ಟ್ರಿ ಏನು ಅನ್ನೋದು ಜಗತ್ತಿನಲ್ಲಿ ಪ್ರೂವ್ ಆಗಿದೆ. ಇದು ಕೆಜಿಎಫ್- 2ಚಿತ್ರಂದ ಗೊತ್ತಾಗಿದೆ. ಇಂಥ ಮಾತುಗಳನ್ನು ಒಂದು ಕಿವಿಯಲ್ಲಿ ಕೇಳಿ ಇನ್ನೊಂದು ಕಿವಿಯಿಂದ ಆಚೆ ಬಿಡಬೇಕು ಎಂದಿದ್ದಾರೆ.
PublicNext
26/05/2022 09:16 pm