ನಿರ್ಮಾಪಕ ಕರಣ್ ಜೋಹರ್ ಅವರ 50ನೇ ವರ್ಷದ ಹುಟ್ಟುಹಬ್ಬದ ಪಾರ್ಟಿಯಲ್ಲಿ ಸಿನಿಮಾ ಮಂದಿ ಸಖತ್ ಎಂಜಾಯ್ ಮಾಡಿದ್ದಾರೆ.
ಹೌದು ಕರಣ್ ಹುಟ್ಟುಹಬ್ಬದ ಸಂಭ್ರಮಕ್ಕೆ ಇಡೀ ಚಿತ್ರರಂಗವೇ ಸಾಕ್ಷಿಯಾಗಿ ಕರಣ್ ಗೆ ಶುಭಹಾರೈಸಿದ್ದಾರೆ. ಯಾರೆಲ್ಲ ತಾರೆಯರು ಬರ್ತ್ ಡೇ ಸಂಭ್ರಮಕ್ಕೆ ಸಾಕ್ಷಿಯಾದರು.
ಇನ್ನು ನಿರ್ದೇಶಕನಾಗಿ, ನಿರ್ಮಾಪಕನಾಗಿ, ನಿರೂಪಕನಾಗಿ ಕರಣ್ ಹಿಂದಿ ಚಿತ್ರರಂಗಕ್ಕೆ ಕೊಟ್ಟಿರೋ ಕೊಡುಗೆ ಅಪಾರ. ಇನ್ನು ಮೇ 25ರಂದು 50ನೇ ವರ್ಷಕ್ಕೆ ಕರಣ್ ಜೋಹರ್ ಕಾಲಿಟ್ಟಿದ್ದಾರೆ.
ಆಫ್ ಸೆಂಚುರಿ ಭಾರಿಸಿರೋ ಕರಣ್ ಬರ್ತಡೇಯನ್ನ ಅದ್ದೂರಿಯಾಗಿ ಮುಂಬೈನ ಯಶ್ ರಾಜ್ ಸ್ಟುಡಿಯೋದಲ್ಲಿ ಆಚರಿಸಲಾಯ್ತು. ಬರ್ತ್ಡೇಗೆ ಸಲ್ಮಾನ್ ಖಾನ್,ಕರೀನಾ ಮತ್ತು ಸೈಫ್ ಆಲಿಖಾನ್, ವಿಕ್ಕಿ ಮತ್ತು ಕತ್ರಿನಾ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ, ಟೈಗರ್ ಶ್ರಾಫ್, ಸಿದ್ಧಾರ್ಥ್ ಮತ್ತು ಪ್ರಿಯಾಂಕಾ ಚೋಪ್ರಾ, ವರುಣ್ ಧವನ್, ಕಿಯಾರಾ, ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್, ರಣ್ಬೀರ್ ಕಪೂರ್ ಮತ್ತು ನೀತು ಕಪೂರ್ ಹೀಗೆ ಸಾಕಷ್ಟು ಸ್ಟಾರ್ಸ್ ಈ ಪಾರ್ಟಿಗೆ ಭಾಗವಹಿಸಿದ್ದರು.
PublicNext
26/05/2022 03:43 pm