ಬೆಂಗಳೂರು:ಕನ್ನಡದ ರಾಕಿಂಗ್ ಸ್ಟಾರ್ ಯಶ್ ಈಗ ಕನ್ನಡದ ಸ್ಟಾರ್ ಆಗಿ ಉಳಿದಿಲ್ಲ. ನ್ಯಾಷನಲ್ ಸ್ಟಾರ್ ಆಗಿಯೂ ಉಳಿದಿಲ್ಲ. ಈ ನಾಯಕ ನಟ ಈಗ ಭಾರತೀಯ ಸಿನಿಮಾ ರಂಗದ ಸೂಪರ್ ಸ್ಟಾರ್ ಆಗಿದ್ದಾರೆ. ಈ ಸತ್ಯವನ್ನ ನಾವು ಹೇಳುತ್ತಿಲ್ಲ. ಅದನ್ನ ಹೇಳ್ತಿರೋದು ಯಾರೂ ಅಂತ ಹೇಳ್ತಿವಿ ಬನ್ನಿ.
ಇದು ಒಂದು ಹಂತಕ್ಕೆ ನಿಜವೇ ಬಿಡಿ. ಕನ್ನಡದ ನಾಯಕ ನಟ ಯಶ್ ಸಂಪೂರ್ಣ ಬದಲಾಗಿದ್ದಾರೆ. ಇವರ ಸಿನಿಮಾ ಜನಪ್ರಿಯತೆ ಇಡೀ ಭಾರತವನ್ನೆ ಆವರಿಸಿಕೊಂಡಿದೆ. ಕೆಜಿಎಫ್ ಚಿತ್ರದ ಬಳಿಕ ಯಶ್ ನ್ಯಾಷನಲ್ ಸ್ಟಾರ್ ಆಗಿಯೇ ಬಿಟ್ಟಿದ್ದಾರೆ.
ಆದರೆ, ಈ ನಟನನ್ನ ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರು ವಿಶೇಷವಾಗಿಯೇ ಬಣ್ಣಿಸಿದ್ದಾರೆ. ಯಶ್ ಈಗ ನ್ಯಾಷನಲ್ ಸ್ಟಾರ್ ಆಗಿ ಉಳಿದಿಲ್ಲ. ಬದಲಾಗಿ ಭಾರತೀಯ ಸಿನಿಮಾರಂಗದ ಸೂಪರ್ ಸ್ಟಾರ್ ಆಗಿದ್ದಾರೆ ಎಂದು ಸಂದರ್ಶನವೊAದರಲ್ಲಿ ಹೇಳಿಕೊಂಡಿದ್ದಾರೆ.
ಇAತಹ ಈ ಸೂಪರ್ ಸ್ಟಾರ್ ಇನ್ಮುಂದೆ ಸಣ್ಣ-ಪುಟ್ಟ ಸಿನಿಮಾಗಳಲ್ಲಿ ನಟಿಸೋದೇ ಇಲ್ಲ. ಬದಲಾಗಿ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿಯೇ ನಟಿಸಲಿದ್ದಾರೆ ಎಂದು ವಿಜಯ್ ಕಿರಗಂದೂರು ತಿಳಿಸಿದ್ದಾರೆ. ಮುಂದಿನ ಎರಡ್ಮೂರು ವರ್ಷದಲ್ಲಿ ಕೆಜಿಎಫ್-3 ಚಿತ್ರ ನಿರೀಕ್ಷಿಸಬಹುದು ಅಂತಲೂ ಈಗಲೇ ಹೇಳಿದ್ದಾರೆ.
PublicNext
26/05/2022 03:39 pm