ಬೆಂಗಳೂರು: ತೆಲುಗು ಸಿನಿಮಾ ನಿರ್ದೇಶಕ ಗೀತಾ ಕೃಷ್ಣ ಅವರು, ಕನ್ನಡ ಚಿತ್ರರಂಗ, ಸ್ಯಾಂಡಲ್‌ವುಡ್ ನಟಿಯರ ಬಗ್ಗೆ ತುಚ್ಚವಾಗಿ ಮಾತನಾಡಿದ್ದಾರೆ. ಅವರ ಹೇಳಿಕೆ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಯುಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿರುವ ಗೀತಾ ಕೃಷ್ಣ, 'ಕಾಸ್ಟಿಂಗ್ ಕೌಚ್ ವಿಚಾರದಲ್ಲಿ ತಮಿಳು ಚಿತ್ರರಂಗದವರು ತುಂಬ ಅಸಹ್ಯ, ಕನ್ನಡದವರಂತೂ ಇನ್ನೂ ಅಸಹ್ಯ. ಕಾಸ್ಟಿಂಗ್ ಕೌಚ್ ಹುಟ್ಟಿದ್ದೇ ತಮಿಳು ಚಿತ್ರರಂಗದಲ್ಲಿ. ನಟಿಯಿಂದ ನನಗೂ ಕೂಡ ಕಾಸ್ಟಿಂಗ್ ಕೌಚ್ ಅನುಭವ ಆಗಿದೆ. ಅವಕಾಶ ಬೇಕು ಅಂತ ಮಂಚ ಏರುವುದು ಸ್ಯಾಂಡಲ್‌ವುಡ್‌ನಲ್ಲಿ ಕಾಮನ್ ಆಗಿಬಿಟ್ಟಿದೆ. ಹೀಗಾಗಿ ನಾನು 20 ವರ್ಷಗಳ ಹಿಂದೆ ಕನ್ನಡದ ಸಹವಾಸ ಬಿಟ್ಟೆ. ಸಿನಿಮಾ ಆಫರ್‌ಗಳಿಗೋಸ್ಕರ ನಟಿಯರು ಮಂಚ ಏರುತ್ತಾರೆ. ಸಂಗೀತ ನಿರ್ದೇಶಕರು ಕೂಡ ಗಾಯಕಿಯರ ಜೊತೆ ಮಲಗುತ್ತಾರೆ. ಸಾಫ್ಟ್‌ವೇರ್ ಲೋಕದಲ್ಲಿಯೂ ಹೀಗೆ ನಡೆಯುತ್ತದೆ' ಎಂದು ಹೇಳಿದ್ದಾರೆ.
ಬಹುತೇಕ ನಟಿಯರು ಲೈಂಗಿಕ ಸೇವೆ ಒದಿಸಿಯೇ ಚಿತ್ರರಂಗದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ ಎಂದು ಕನ್ನಡದ ಬಗ್ಗೆ ಮತ್ತು ಸಿನಿಮಾರಂಗದ ನಾಯಕಿಯರ ಬಗ್ಗೆ ತುಚ್ಚವಾಗಿ ನಿರ್ದೇಶಕ ಗೀತ ಕೃಷ್ಣ ಮಾತನಾಡಿದ್ದಾರೆ. ಸದ್ಯ ನಿರ್ದೇಶಕನ ಈ ಮಾತುಗಳು ಚಿತ್ರರಂಗದಲ್ಲಿ ವಿವಾದದ ಜೊತೆ ಸಂಚಲನ ಮೂಡಿಸುತ್ತಿದೆ.
PublicNext
24/05/2022 03:44 pm