ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಲಿವುಡ್ ಜಾಕ್ವಲಿನ್ ಹಿಂದೆ ಬಿದ್ದ ಕನ್ನಡದ ಕಿಚ್ಚ ಸುದೀಪ್ !

ಬೆಂಗಳೂರು:ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದ ಹೈಪ್ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಈ ಚಿತ್ರದ ಒಂದೊಂದು ಸುದ್ದಿನೂ ಒಂದೊಂದು ರೀತಿ ಹೈಪ್ ಕ್ರಿಯೇಟ್ ಮಾಡುತ್ತಿವೆ. ಅದರಂತೆ ಬಾಲಿವುಡ್ ನಟಿ ಜಾಕ್ವಲಿನ್ ಫರ್ನಾಂಡಿಸ್ ನೃತ್ಯ ಮಾಡಿರೋ ಚಿತ್ರದ ಹಾಡೊಂದು ಈಗ ರಿಲೀಸ್ ಆಗಿ ಭಾರಿ ಸೌಂಡ್ ಮಾಡ್ತಿದೆ.

ಜಾಕ್ವಲಿನ್ ಫರ್ನಾಂಡಿಸ್ ನೃತ್ಯ ಮಾಡಿರೋ ಈ ಹಾಡನ್ನ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಬರೆದಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತದಲ್ಲಿ ಮೂಡಿ ಬಂದಿರೋ ಈ ವಿಶೇಷ ಹಾಡಲ್ಲಿ ಕಿಚ್ಚ ಸುದೀಪ್ ಮತ್ತು ಜಾಕ್ವಲಿನ್ ಫರ್ನಾಂಡಿಸ್ ಸಖತ್ ಆಗಿಯೇ ಕಾಣಿಸಿಕೊಂಡಿದ್ದಾರೆ.

ನಕಾಶ್ ಅಜೀಜ್ ಮತ್ತು ಸುನಧಿ ಚೌಹಾಣ್ ಹಾಡಿರೋ ಈ ಗೀತೆಯ ಲಿರಿಕಲ್ ವೀಡಿಯೋ ಈಗ ರಿಲೀಸ್ ಆಗಿದೆ. ಚಿತ್ರದ ಈ ಗೀತೆಯನ್ನ ಪಬ್ಲಿಕ್ ನೆಕ್ಸಟ್ ಜೊತೆಗೆ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಹಂಚಿಕೊಂಡಿದ್ದಾರೆ. ಉಳಿದಂತೆ ಚಿತ್ರದ ಈ ಗೀತೆ ಸಖತ್ ಕಿಕ್ ಕೊಡೋ ಹಾಗೇನೆ ಇದೆ.

-ರೇವನ್ ಪಿ.ಜೇವೂರ್,ಎಂಟರಟೈನಮೆಂಟ್‌ ಬ್ಯೂರೋ,ಪಬ್ಲಿಕ್ ನೆಕ್ಸ್ಟ್

Edited By :
PublicNext

PublicNext

23/05/2022 04:03 pm

Cinque Terre

65.76 K

Cinque Terre

0

ಸಂಬಂಧಿತ ಸುದ್ದಿ