ಮುಂಬೈ: ಬಾಲಿವುಡ್ ಆಕ್ಷನ್ ಹೀರೋ ಅಕ್ಷಯ್ ಕುಮಾರ್ ಈಗೊಂದು ಹೇಳಿಕೆ ಕೊಟ್ಟಿದ್ದಾರೆ. ಈ ಹೇಳಿಕೆ ಈಗ ಭಾರೀ ಸಂಚಲನ ಸೃಷ್ಟಿ ಮಾಡಿದೆ. ಉತ್ತರ ಭಾರತದ ಸಿನಿಮಾ, ದಕ್ಷಿಣ ಭಾರತದ ಸಿನಿಮಾ ಅನ್ನೋ ತಾರತಮ್ಯದ ಮೇಲೇನೆ ಅಕ್ಷಯ್ ಹೇಳಿಕೆ ಕೊಟ್ಟು ಈಗ ಎಲ್ಲರ ಗಮನ ಸೆಳೆದಿದ್ದಾರೆ.
ಹೌದು. ಸದ್ಯ ಬಾಲಿವುಡ್ ಒಂದು ಕಡೆ ಆದರೆ, ದಕ್ಷಿಣದ ಸಿನಿಮಾಗಳ ಅಬ್ಬರ ಇನ್ನೊಂದು ಕಡೆಗೆ ಇದೆ. ದಕ್ಷಿಣದ ಸಿನಿಮಾಗಳು ಈಗ ಭಾರೀ ಸೌಂಡ್ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿಯೇ ಉತ್ತರ ಭಾರತದ ಸಿನಿಮಾ ದಕ್ಷಿಣ ಭಾರತದ ಸಿನಿಮಾ ಅಂತ ಇಬ್ಬಾಗ ಆಗಿ ಬಿಟ್ಟಿದೆ.
ಈ ಹಿನ್ನೆಲೆಯಲ್ಲಿಯೇ ಅಕ್ಷಯ್ ಕುಮಾರ್ ಮಾತನಾಡದ್ದು, ಬ್ರಿಟಿಷರು ನಮ್ಮನ್ನ ಒಡೆದು ಆಳಿದರು. ಅದರಿಂದ ಈಗಲೂ ನಾವು ಪಾಠ ಕಲಿತಿಲ್ಲ ಅಂತಲೇ ಬೇಸರದಿಂದಲೇ ಅಕ್ಷಯ್ ಕುಮಾರ್ ಹೇಳಿಕೊಂಡಿದ್ದಾರೆ.
ಸಿನಿಮಾ ಅಂದ್ರೆ ಅದು ಸಿನಿಮಾನೇ. ಅಲ್ಲಿ ಉತ್ತರ ಮತ್ತು ದಕ್ಷಿಣ ಅಂತ ಇರೋದೇ ಇಲ್ಲ ಅಂತಲೂ ಹೇಳಿದ್ದಾರೆ ಅಕ್ಷಯ್.
PublicNext
23/05/2022 03:18 pm