ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈಗ ಸೂಪರ್ ಹೀರೋ ಲುಕ್ ನಲ್ಲಿಯೇ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರಕ್ಕೆ ಸಚಿನ್ ನಿರ್ದೇಶನ ಮಾಡಲಿದ್ದಾರೆ.
ಹೌದು. ಅವನೇ ಶ್ರೀಮನ್ನಾರಾಯಣ ಚಿತ್ರದ ಯುವ ನಿರ್ದೇಶಕ ಸಚಿನ್ ಜೊತೆಗೆ ಶಿವರಾಜ್ ಕುಮಾರ್ ಒಂದು ಪ್ರೋಜೆಕ್ಟ್ ಒಪ್ಪಿಕೊಂಡಿದ್ದಾರೆ. ಈ ಚಿತ್ರದಲ್ಲಿಯೇ ಶಿವರಾಜ್ ಕುಮಾರ್ ಸೂಪರ್ ಹೀರೋ ಲುಕ್ ಅಲ್ಲಿಯೇ ಕಾಣಿಸಿಕೊಳ್ಳಲಿದ್ದಾರೆ.
ಶಿವರಾಜ್ ಕುಮಾರ್ ಒಟ್ಟು 35 ವರ್ಷದ ಸಿನಿ ಜರ್ನಿಯಲ್ಲಿ 125 ಹೆಚ್ಚು ಸಿನಿಮಾ ಮಾಡಿದ್ದಾರೆ. ವಿವಿಧ ಪಾತ್ರಗಳನ್ನೂ ಅಷ್ಟೇ ಅಚ್ಚುಕಟ್ಟಾಗಿಯೇ ಅಭಿನಯಿಸಿದ್ದಾರೆ. ಆದರೆ, ಈಗ ಈ ಸೂಪರ್ ಹೀರೋ ಲುಕ್ ನಲ್ಲೂ ಕಾಣಿಸಿಕೊಳ್ಳಲು ರೆಡಿ ಆಗುತ್ತಿದ್ದಾರೆ.
PublicNext
19/05/2022 09:13 am