ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು ಬಂದರು "ಕಬ್ಜ" ಮಾಡಿದ ರಿಯಲ್ ಸ್ಟಾರ್ !

ಮಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಈ ಚಿತ್ರ ಕೂಡ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಇಂತಹ ಈ ಚಿತ್ರದ ಚಿತ್ರೀಕರಣಕ್ಕೆ ಇಡೀ ತಂಡ ಈಗ ಮಂಗಳೂರು ಬಂದರಿನಲ್ಲಿ ಬೀಡು ಬಿಟ್ಟಿದೆ.

ಚಿತ್ರದ ಪ್ರಮುಖ ಆಕ್ಷನ್ ಸೀನ್ ಗಾಗಿಯೇ ಡೈರೆಕ್ಟರ್ ಆರ್. ಚಂದ್ರು, ಆಕ್ಷನ್ ಡೈರೆಕ್ಟರ್ ರವಿ ವರ್ಮ ಇಲ್ಲಿಗೆ ಬಂದಿದ್ದಾರೆ.ಭರ್ಜರಿ ಆಕ್ಷನ್ ಗಳನ್ನೇ ಈಗಾಗಲೇ ಈ ಚಿತ್ರದಲ್ಲಿ ಪ್ಲಾನ್ ಮಾಡಲಾಗಿದೆ.

ಉಳಿದಂತೆ ಸದ್ಯ ಚಿತ್ರದ ಚಿತ್ರೀಕರಣ ಕೊನೆ ಹಂತಕ್ಕೆ ಬಂದು ತಲುಪಿದೆ. ಅದಕ್ಕೇನೆ ಚಿತ್ರದ ಪ್ರಮುಖ ಆಕ್ಷನ್ ದೃಶ್ಯಗಳನ್ನ ಮಂಗಳೂರಿನ ಬಂದರಿನಲ್ಲಿ ತೆಗೆಯಲು ಚಿತ್ರ ತಂಡ ಬೆಂಗಳೂರಿನಿಂದ ಮಂಗಳೂರಿಗೆ ಬಂದಿದೆ.

Edited By :
PublicNext

PublicNext

19/05/2022 08:39 am

Cinque Terre

66.09 K

Cinque Terre

1