ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಹಾಗೂ ಜನರಿಂದ ಮೆಚ್ಚುಗೆಗಳಿಸಲು ಎಂತಂತೆಹಾ ವಿಚಿತ್ರ ಘಟನೆಗಳು ವರದಿಯಾಗುತ್ತಿವೆ ಇರುತ್ತವೆ.
ಈ ಸಾಲಿಗೆ ಹೊಸ ಸೇರ್ಪಡೆ ಎಂಬಂತೆ ಇಲ್ಲೋಬ್ಬ ಪಾಕಿಸ್ತಾನಿ ಇಸ್ಲಾಮಬಾದ್ ಸೋಶಿಯಲ್ ಮೀಡಿಯಾ ತಾರೆ ಹುಮೈರಾ ಅಸ್ಗರ್ ಎಂಬಾಕೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ತನ್ನ ವಿಡಿಯೋಗಾಗಿ ಬೆಟ್ಟದಲ್ಲಿ ಬೆಳೆದ ಕಸಕ್ಕೆ ಬೆಂಕಿ ಇಟ್ಟು ಧಗ ಗಧಗಿಸುವ ಬೆಂಕಿ ಮುಂದೆ ಪೋಜ್ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಪೋಸ್ಟ್ ಮಾಡಿ ನಾನು ಎಲ್ಲಿ ಇರುತ್ತೇನೋ ಅಲ್ಲಿ ಬೆಂಕಿ ಸ್ಟೋಟಗೊಳ್ಳುತ್ತದೆ ಎಂದು ಕಾಪ್ಸನ್ ಬರೆದಿದ್ದಾಳೆ.
ಸಿಲ್ವರ್ ಬಣ್ಣದ ಗೌನ್ ಧರಿಸಿ ಬೆಂಕಿಯಿಂದ ಉರಿಯುತ್ತಿರುವ ಬೆಟ್ಟದ ಮುಂದೆ ನಡೆದುಕೊಂಡು ಬರುತ್ತಿರುವ ವಿಡಿಯೋ 11 ಸೆಕೆಂಡ್'ಗಳ ವಿಡಿಯೋ ಕ್ಲಿಪ್ ನೀವೂ ನೋಡಬಹುದು.
ಈ ವಿಡಿಯೋ ನೋಡಿದ ನೆಟ್ಟಿಗರು ಪರಿಸರ ಕಾಳಜಿ ಮರೆತು ಬೇಜವಾಬ್ದಾರಿ ತೋರಿದ ಯುವತಿ ನಡೆಗೆ ಟೀಕೆಗಳ ಮಹಾಮಳೆ ಸುರಿಸಿದ್ದು ಈ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಹಿಂಬಾಲಕರನ್ನು ಸಹ ಹೊಂದಿದ್ದಾಳೆ.
PublicNext
18/05/2022 01:37 pm