ಬೆಂಗಳೂರು: ಕನ್ನಡದ ಕಿರುತೆರೆಯ ಡ್ಯಾನ್ಸಿಂಗ್ ಚಾಪಿಯನ್ ರಿಯಾಲಿಟಿ ಶೋ ಈಗ ಕೊನೆ ಹಂತ ತಲುಪಿದ್ದು, ಈ ಶೋದ ಗ್ರ್ಯಾಂಡ್ ಫಿನಾಲೆ ಶೋಗೆ ವಿಶೇಷ ಅತಿಥಿ ಕೂಡ ಬಂದಿದ್ದಾರೆ. ಬನ್ನಿ, ಯಾರು ಅಂತ ಹೇಳ್ತಿವಿ.
ಹೌದು. ಡ್ಯಾನ್ಸಿಂಗ್ ಚಾಂಪಿಯನ್ ರಿಯಾಲಿಟಿ ಶೋ ಸಖತ್ ಆಗಿಯೇ ಮೂಡಿ ಬಂದಿದೆ. ಸ್ಪರ್ಧಿಗಳೂ ಸಾಕಷ್ಟು ಸ್ಪೋಟಿವ್ ಆಗಿಯೇ ಭಾಗವಹಿಸಿ ನೋಡುಗರ ದಿಲ್ ಕದ್ದಿದ್ದಾರೆ. ಜೆಡ್ಜ್ ಗಳ ಮನ ಖುಷ್ ಮಾಡಿದ್ದಾರೆ.
ಇಂತಹ ಶೋದ ಗ್ರ್ಯಾಂಡ್ ಫಿನಾಲೆಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಗೆಸ್ಟ್ ಆಗಿ ಬಂದಿದ್ದಾರೆ. ಈಗಾಗಲೇ ಈ ಶೋದ ಚಿತ್ರೀಕರಣ ಕೂಡ ಮುಗಿದಿದ್ದು ಗೆದ್ದವರು ಧ್ರುವ ಸರ್ಜಾ ಬಂದ ಖುಷಿಯನ್ನ ಹಂಚಿಕೊಂಡು ಖುಷಿಪಟ್ಟಿದ್ದಾರೆ. ಧ್ರುವ ಸರ್ಜಾ ಫ್ಯಾನ್ಸ್ ಕೂಡ ಫುಲ್ ಖುಷ್ ಆಗಿದ್ದಾರೆ.
PublicNext
18/05/2022 08:19 am