ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಾಲಿ ಧನಂಜಯ್ ಮತ್ತೆ ವಿಲನ್ !

ಬೆಂಗಳೂರು: ಟಗರು ಚಿತ್ರ ಖ್ಯಾತಿಯ ಡಾಲಿ ಧನಂಜಯ್ ಮತ್ತೊಮ್ಮೆ ವಿಲನ್ ಪಾತ್ರ ಒಪ್ಪಿಕೊಂಡಿದ್ದಾರೆ. ಟಗರು ಚಿತ್ರ ಬಂದ್ಮೇಲೆ ವಿಲನ್ ಪಾತ್ರಗಳೇ ಈ ನಾಯಕನನ್ನ ಹುಡುಕಿಕೊಂಡು ಬಂದಿವೆ. ಆ ಗ್ಯಾಪ್‌ ನಲ್ಲಿಯೇ ಧನಂಜಯ್ ಹೀರೋ ಆಗಿಯೂ ಕಾಣಿಸಿಕೊಂಡಿದ್ದಾರೆ.

ಹೌದು. ಧನಂಜಯ್ ಮತ್ತೊಂದು ಚಿತ್ರಕ್ಕೆ ವಿಲನ್ ಪಾತ್ರವನ್ನ ಒಪ್ಪಿಕೊಂಡಿದ್ದಾರೆ. ವಿಶೇಷ ಅಂದ್ರೆ, ಸಂತೋಷ್ ಆನಂದ್ ರಾಮ್ ನಿರ್ದೇಶನದ ಚಿತ್ರಕ್ಕೇನೆ ಡಾಲಿ ಧನಂಜಯ್ ವಿಲನ್ ಆಗಿ ಅಭಿನಯಿಸ್ತಿರೋದು.

ಈ ಚಿತ್ರದ ಹೀರೋ ಯಾರೂ ಗೊತ್ತೇ ? ಅದು ಬೇರೆ ಯಾರೋ ಅಲ್ಲ. ಅದು ರಾಜ್ ಮೊಮ್ಮಗ ಯುವರಾಜ್‌ ಕುಮಾರ್. ಈ ಮೊದಲ ಚಿತ್ರದ ಮೂಲಕ ಯುವರಾಜ್ ಬೇರೆ ಗತ್ತಿನಲ್ಲಿಯೇ ಬರ್ತಿದ್ದಾರೆ.

ಈ ಹೊಸ ಹೀರೋಗೆ ಎದುರಾಗಿಯೇ ಅಭಿನಯಿಸಲು ಧನಂಜಯ್ ಒಪ್ಪಿಕೊಂಡಿದ್ದಾರೆ. ಅದರಲ್ಲೂ ವಿಲನ್ ಪಾತ್ರ ಮತ್ತೊಮ್ಮೆ ಮಾಡೋಕೆ ಒಪ್ಪಿರೋದು ವಿಶೇಷ.

Edited By :
PublicNext

PublicNext

16/05/2022 07:45 am

Cinque Terre

32.98 K

Cinque Terre

0