ಬೆಂಗಳೂರು: ಸ್ಯಾಂಡ್‌ವುಡ್ ಕ್ವೀನ್ ರಮ್ಯಾ ರಾಜಕೀಯ ಮತ್ತು ಸಿನಿಮಾ ವಿಚಾರಕ್ಕೆ ಮತ್ತೆ ಸುದ್ದಿಯಲ್ಲಿದ್ದಾರೆ. ಸಿನಿಮಾ ವಿಚಾರಕ್ಕೆ ಬಂದ್ರೆ, ರಕ್ಷಿತ್ ಶೆಟ್ಟಿ ಸಿನಿಮಾದ ಮೂಲಕ ರಮ್ಯಾ ಕಮ್ ಬ್ಯಾಕ್ ಮಾಡಲಿದ್ದಾರೆ ಅನ್ನೋ ಮಾತು ದಟ್ಟವಾಗಿದೆ. ಆದರೆ, ಈ ಒಂದು ಸತ್ಯಕ್ಕೆ ರಕ್ಷಿತ್ ಶೆಟ್ಟಿ ಈಗಲೇ ತೆರೆ ಎಳೆದು ಬಿಟ್ಟಿದ್ದಾರೆ.
ನಟಿ ರಮ್ಯಾ ಮೊನ್ನೆ ರಕ್ಷಿತ್ ಶೆಟ್ಟಿಗೆ ಟ್ವಿಟ್ ಮಾಡಿದ್ದರು. ಒಟ್ಟಿಗೆ ಸಿನಿಮಾ ಮಾಡೋಣ ಅಂತಲೂ ಇಂಗಿತ ವ್ಯಕ್ತಪಿಡಿಸಿದ್ದರು. ಆದರೆ, ಆ ಆಸೆಗೆ ರಕ್ಷಿತ್ ಶೆಟ್ಟಿ ಈಗಲೇ ಫುಲ್ ಸ್ಟಾಪ್ ಇಟ್ಟಿದ್ದಾರೆ.
ರಮ್ಯಾ ಜೊತೆಗೆ ಕೆಲಸ ಮಾಡುತ್ತೇನೆ. ಅದು ಈಗ ಅಸಾಧ್ಯ. ರಮ್ಯಾ ಅವರಿಗೆ ಒಪ್ಪು ಕಥೆ ಸದ್ಯಕ್ಕೆ ನನ್ನ ಬಳಿ ಇಲ್ಲ. ಬರೆದಿರೋ ಕಥೆಯಲ್ಲಿ ರಮ್ಯಾ ಅವರಿಗೆ ಸೂಟ್ ಆಗೋ ಪಾತ್ರಗಳೇ ಇಲ್ಲ. ಆದರೆ ಮುಂದೊಂದಿನ ಅವರೊಟ್ಟಿಗೆ ಕೆಲಸ ಮಾಡುತ್ತೇನೆ ಅಂತಲೇ ರಕ್ಷಿತ್ ಹೇಳಿಕೊಂಡಿದ್ದಾರೆ.
ಅಂದ್ಹಾಗೆ, ಉಳಿದವರು ಕಂಡಂತೆ ಚಿತ್ರಕ್ಕಾಗಿಯೇ ರಕ್ಷಿತ್ ಶೆಟ್ಟಿ, ರಮ್ಯಾರನ್ನ ಅಪ್ರೋಚ್ ಮಾಡಿದ್ದರು. ಆದರೆ ರಮ್ಯಾ ಚಿತ್ರದ ಕಥೆ ಕೇಳಿ ಈ ಕಥೆ ನನಗೆ ಅರ್ಥವೇ ಆಗಲಿಲ್ಲ. ಪಾತ್ರ ಹೇಗೆ ಮಾಡಲಿ ? ನಾನು ಈ ಪ್ರಾಜೆಕ್ಟ್ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಅಂತಲೇ ಹೇಳಿದ್ದರು.
PublicNext
13/05/2022 03:27 pm