ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅವತಾರ್ ಚಿತ್ರದ ಪಾತ್ರಗಳು ಕನ್ನಡದಲ್ಲೂ ಮಾತ್ ಆಡ್ತವೆ !

ಹಾಲಿವುಡ್‌ನ ಅತ್ಯದ್ಭುತ ಕಲ್ಪನೆಯ ಅವತಾರ್ ಸಿನಿಮಾದ ಆ ಸೆಳೆತ ಇನ್ನೂ ಇದೆ. ಅದರ ಆ ಮೋಡಿಗೆ ಇಡೀ ಜಗತ್ತು ನಿಜಕ್ಕೂ ಮರುಳಾಗಿತ್ತು. ಡೈರೆಕ್ಟರ್ ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಈ ಚಿತ್ರದ ಎರಡನೇ ಭಾಗ ರೆಡಿ ಆಗಿದೆ. ಎಲ್ಲ ಭಾಷೆಯಲ್ಲೂ ಡಬ್ ಆಗಿರೋ ಈ ಚಿತ್ರದ ಕನ್ನಡದ ಮೊದಲ ಟ್ರೈಲರ್ ಇಲ್ಲಿದೆ. ಬನ್ನಿ, ನೋಡೋಣ.

ಈ ಚಿತ್ರದ ಪ್ರತಿ ಫ್ರೇಮ್ ಕೂಡ ನಿಮ್ಮನ್ನ ಬೇರೆ ಲೋಕಕ್ಕೆ ಕರೆದುಕೊಂಡು ಹೋಗಿ ಬಿಡುತ್ತದೆ. ಮೊದಲ ಭಾಗದಲ್ಲಿ ಈ ಅನುಭವ ಈ ಚಿತ್ರ ನೋಡಿದ ಪ್ರತಿಯೊಬ್ಬರಿಗೂ ಆಗಿದೆ. ಎರಡನೇ ಭಾಗದ ಬಗ್ಗೆ ಇದ್ದ ಕುತೂಹಲ ಈಗ ಮತ್ತಷ್ಟು ಹೆಚ್ಚಿಸಿದೆ ಈ ಒಂದು ಟ್ರೈಲರ್.

ಹೌದು.ಅವತಾರ್ ದಿ ವೇ ಆಫ್ ವಾಟರ್ ಚಿತ್ರದ ಟ್ರೈಲರ್ ಈಗ ರಿಲೀಸ್ ಆಗಿದೆ. ಚಿತ್ರದ ಒಟ್ಟು ಝಲಕ್ ಅನ್ನೇ ಈ ಟ್ರೈಲರ್ ಕಟ್ಟಿಕೊಡುತ್ತಿದೆ. ಇದೇ ವರ್ಷ ಡಿಸೆಂಬರ್-16 ರಂದು ಚಿತ್ರವೂ ರಿಲೀಸ್ ಆಗುತ್ತಿದೆ. ವಿಶೇಷ ಅಂದ್ರೆ ಆಯಾ ಪ್ರಾದೇಶಿಕ ಭಾಷೆಯಲ್ಲಿ ಈ ಚಿತ್ರ ಡಬ್ ಆಗುತ್ತಿದ್ದು, ಮತ್ತಷ್ಟು ಇನ್ನಷ್ಟು ಅನ್ನೋ ಹಾಗೆ ಹತ್ತಿರ ಆಗಲಿದೆ.

Edited By :
PublicNext

PublicNext

10/05/2022 04:35 pm

Cinque Terre

75.27 K

Cinque Terre

0