ಬೆಂಗಳೂರು: ಸ್ಯಾಂಡ್‌ವುಡ್ ಕ್ವೀನ್ ರಮ್ಯಾ ಜೊತೆಗೆ ಕಾಣಿಸಿಕೊಂಡ ಆ ಹುಡುಗ ಯಾರು ? ಈ ಒಂದು ಪ್ರಶ್ನೆಯನ್ನ ಕೇಳುವಂತೆ ಮಾಡಿದೆ ಈ ಒಂದು ಫೋಟೋ.ಕಾರಣ, ಈ ಫೋಟೋ ನೋಡಿದವರಿಗೆ ಬೇರೆ ಫೀಲ್ ಬರುತ್ತದೆ. ಅದರ ಜೊತೆಗೆ ಕುತೂಹಲವೂ ಹೆಚ್ಚಾಗಿದೆ. ಬನ್ನಿ, ಹೇಳ್ತಿವಿ.
ನಟಿ ರಮ್ಯಾ ಜೊತೆಗೆ ಇರೋ ಈ ಯುವಕನ ಹೆಸರು ಕರಣ್ ಜೋಶಿ. ಇಷ್ಟು ಬಿಟ್ಟರೇ, ಬೇರೆ ಏನೂ ಮಾಹಿತಿ ದೊರೆಯೋದಿಲ್ಲ. ಆದರೆ, ರಮ್ಯಾ ಜೊತೆ ಫೋಟೋ ತೆಗೆಸಿಕೊಂಡ ಅನ್ನೋ ಕಾರಣಕ್ಕೇನೆ ಈಗ ವೈರಲ್ ಆಗಿದ್ದಾರೆ.
ಅಂದ್ಹಾಗೆ ರಮ್ಯಾ ಕನ್ನಡ ಇಂಡಸ್ಟ್ರೀಗೆ ಕಮ್‌ಬ್ಯಾಕ್ ಮಾಡ್ತಿದ್ದಾರೆ. ಆ ಕಮ್ ಬ್ಯಾಕ್ ಚಿತ್ರದ ಹೀರೋನಾ ಈ ಯುವಕ ಇಲ್ಲವೇ ಆ ಚಿತ್ರದ ಕಥೆಗಾರನೇ ಇಲ್ಲವೇ ಆ ಚಿತ್ರದ ಡೈರೆಕ್ಟರೇ ? ಗೊತ್ತಿಲ್ಲ. ಆದರೆ, ಈ ಎಲ್ಲ ಪ್ರಶ್ನೆಗಳು ಕೇಳಿ ಬರ್ತಾನೆ ಇವೆ. ಈ ಬಗ್ಗೆ ರಮ್ಯಾನೇ ಹೆಚ್ಚಿನ ಡೀಟೇಲ್ಸ್ ಕೊಡಬೇಕಿದೆ. ವೇಟ್ ಮಾಡಿ.
PublicNext
09/05/2022 06:27 pm