ಬೆಂಗಳೂರು: ಕನ್ನಡದ ನಾಯಕ ನಟ ನೀನಾಸಂ ಸತೀಶ್ ಅಭಿನಯದ ಅಭಿನಯದ ಗೋದ್ರಾ ಚಿತ್ರದ ಟೈಟಲ್ ಬದಲಾಗುತ್ತಿದೆ. ಈ ವಿಷಯವನ್ನ ನಾಯಕ ನಟ ಸತೀಶ್ ಈಗ ವಿಶೇಷವಾಗಿಯೇ ಹೇಳಿಕೊಂಡಿದ್ದಾರೆ.ಬನ್ನಿ, ನೋಡೋಣ.
ಗೋಧ್ರಾ ಚಿತ್ರ ತನ್ನ ವಿಶೇಷ ಟೈಟಲ್ ಮೂಲಕವೇ ಹೆಚ್ಚು ಗಮನಸೆಳೆದಿದೆ. ಕೆ.ಎಸ್.ನಂದೀಶ್ ನಿರ್ದೇಶನದ ಈ ಚಿತ್ರದಲ್ಲಿ ನೀನಾಸಂ ಸತೀಸ್ ಪ್ರಮುಖ ಭೂಮಿಕೆಯಲ್ಲಿಯೇ ಇದ್ದಾರೆ. ಶೃದ್ಧಾ ಶ್ರೀನಾಥ್, ಅಚ್ಚುತ್ ಕುಮಾರ್ ಕೂಡ ನಟಿಸಿದ್ದಾರೆ.
ಇಂತಹ ಈ ಚಿತ್ರದ ಟೈಟಲ್ ಈಗ ಬದಲಾಗುತ್ತಿದೆ. ಯಾವ ಟೈಟಲ್ ಅನ್ನೋದನ್ನ ಕೂಡ ಇನ್ನೂ ರಿವೀಲ್ ಮಾಡಿಯೇ ಇಲ್ಲ. ಆದರೆ, ತಮ್ಮ ಈ ಚಿತ್ರದ ಶೀರ್ಷಿಕೆ ಶೀಘ್ರದಲ್ಲಿಯೇ ಬದಲಾಗುತ್ತಿದೆ. ಯಾವುದು ಅಂತಲೂ ಹೇಳುತ್ತೇವೆ ಅಂತಲೂ ಸ್ವತಃ ಸಂತೀಶ್ ವೀಡಿಯೋ ಮೂಲಕ ಹೇಳಿಕೆ ಕೊಂಡಿದ್ದಾರೆ.
ವಿಶೇಷ ಅಂದ್ರೆ, ದಾವಣಗೆರೆಯಲ್ಲಿ ಇಡ್ಲಿ ತಿಂತಾನೇ ಈ ಒಂದು ವಿಷಯವನ್ನ ನೀನಾಸಂ ಸತೀಶ್ ಹೇಳಿಕೊಂಡು ಗಮನ ಸೆಳೆದಿದ್ದಾರೆ.
-ರೇವನ್ ಪಿ.ಜೇವೂರ್,ಎಂಟರಟೈನಮೆಂಟ್ ಬ್ಯೂರೊ,ಪಬ್ಲಿಕ್ ನೆಕ್ಸ್ಟ್
PublicNext
06/05/2022 12:12 pm