ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯೋಗರಾಜ್ ಭಟ್ಟರ ಗಾಳಿಪಟ-2 ಚಿತ್ರಕ್ಕೆ ಸೆನ್ಸಾರ್ DONE !

ಬೆಂಗಳೂರು: ಡೈರೆಕ್ಟರ್ ಯೋಗರಾಜ್ ಭಟ್ಟ ನಿರ್ದೇಶನದ ಗಾಳಿಪಟ-2 ಚಿತ್ರಕ್ಕೆ ಸೆನ್ಸಾರ್ ಆಗಿದೆ. ಚಿತ್ರದ ನೋಡಿದ ಸೆನ್ಸಾರ್ ಮಂಡಳಿ ಸದಸ್ಯರು ಜನ ಮೆಚ್ಚೋ ಪ್ರಮಾಣ ಪತ್ರವನ್ನೇ ಚಿತ್ರಕ್ಕೆ ಕೊಟ್ಟಿದ್ದಾರೆ. ಆ ಖುಷಿಯನ್ನ ಭಟ್ಟರು ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದಾರೆ.

ಗಾಳಿಪಟ-2 ಚಿತ್ರಕ್ಕೆ 'ಯು' ಪ್ರಮಾಣ ಪತ್ರವೇ ಬಂದಿದೆ. ಚಿತ್ರದಲ್ಲಿ ವಿಭಿನ್ನವಾದ ಕಂಟೆಂಟ್ ಕೂಡ ಇದೆ. ಜನ ಕೂಡ ಇದನ್ನ ಅಷ್ಟೇ ನಿರೀಕ್ಷೆ ಮಾಡ್ತಿದ್ದಾರೆ. ಪವನ್ ಕುಮಾರ್, ಗಣೇಶ್, ದಿಗಂತ್ ರಂತಹ ನಟರು ಈ ಮೂಲಕ ಹೊಸ ಕಥೆಯನ್ನೇ ಕಟ್ಟಿಕೊಂಡು ಬರ್ತಿದ್ದಾರೆ.

ಈ ಒಂದು ವಿಶೇಷ ಖುಷಿಯನ್ನ ಫೇಸ್ ಬುಕ್ ನಲ್ಲಿ ಭಟ್ಟರು ಫೋಟೋ ಸಮೇತ ಹಂಚಿಕೊಂಡಿದ್ದಾರೆ. ಫೋಟೋದ ಜೊತೆಗೆ "ಖುಷಿ ಸುದ್ದಿ" ಅಂತಲೂ ಬರೆದುಕೊಂಡು ಖುಷಿಪಟ್ಟಿದ್ದಾರೆ.

Edited By :
PublicNext

PublicNext

05/05/2022 07:15 pm

Cinque Terre

43.62 K

Cinque Terre

0