ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಕ್ಷಯ್ ಬಾಲಿವುಡ್ ಗೆ ಬಂದು 30 ವರ್ಷ ಪೂರ್ಣ !

ಮುಂಬೈ: ಬಾಲಿವುಡ್ ಆಕ್ಟರ್ ಅಕ್ಷಯ್ ಕುಮಾರ್ ಇಂಡಸ್ಟ್ರೀಗೆ ಕಾಲಿಟ್ಟು ಈಗ 30 ವರ್ಷಗಳೇ ಕಳೆದಿದೆ. ಈ ಒಂದು ಖುಷಿಯನ್ನ ಯಶ್‌ ರಾಜ್ ನಿರ್ಮಾಣ ಸಂಸ್ಥೆ ಈಗ ಸೆಲೆಬ್ರೇಟ್ ಮಾಡಿದೆ. ಅದನ್ನ ಕಂಡು ಅಕ್ಷಯ್ ಕುಮಾರ್ ಥ್ರಿಲ್ ಆಗಿದ್ದಾರೆ.

ಅಕ್ಷಯ್ ಕುಮಾರ್ ಒಬ್ಬ ವಿಶೇಷ ನಾಯಕ ನಟ. ಆಕ್ಷನ್ ನಿಂದ ಈಗ ಕಾಮಿಡಿಗೆ ಹೊರಳಿದ್ದಾರೆ. ಅಲ್ಲಿಂದ ಆಫ್‌ ಬೀಟ್ ಕಥೆಗಳನ್ನೂ ನಿಭಾಯಿಸಿ ಭೇಷ್ ಎನಿಸಿಕೊಂಡಿದ್ದಾರೆ.

1991 ರಲ್ಲಿ ಸುಗಂಧ ಚಿತ್ರದ ಮೂಲಕ ನಾಯಕನಾಗಿ ಪರಿಚಯವಾದ ಅಕ್ಷಯ್ ಕುಮಾರ್, ಹಲವು ಏರಿಳಿತಗಳನ್ನ ಕಂಡು ಈಗ ಯಶಸ್ವಿ ನಾಯಕರಾಗಿಯೇ ಮುನ್ನುಗುತ್ತಿದ್ದಾರೆ. ಪೃಥ್ವಿರಾಜ್ ಚಿತ್ರದ ಮೂಲಕ ಮತ್ತೊಂದು ಹೊಸ ರೂಪದಲ್ಲಿಯೇ ಕಂಗೊಳಿಸುತ್ತಿದ್ದಾರೆ.

ಯಶ್ ರಾಜ್ ಬ್ಯಾನರ್‌ನಲ್ಲಿಯೇ ನಿರ್ಮಾಣವಾಗ್ತಿರೋದ್ರಿಂದಲೇ ಸಂಸ್ಥೆ, ಅಕ್ಷಯ್ ಇಂಡಸ್ಟ್ರಿಗೆ ಬಂದು 30 ವರ್ಷ ಪೂರೈಸಿರೋದನ್ನ ಸೆಲೆಬ್ರೇಟ್ ಮಾಡಿದೆ. ಅಕ್ಷಯ್ ಅಭಿನಯದ ಎಲ್ಲ ಚಿತ್ರಗಳ ಪೋಸ್ಟ್‌ ಒಳಗೊಂಡ ಪೃಥ್ವಿರಾಜ್ ಪೋಸ್ಟರ್ ರೆಡಿ ಮಾಡುವ ಮೂಲಕ ಅಕ್ಷಯ್ ಗೆ ಸರ್ಪರೈಜ್ ನೀಡಿದೆ.

-ರೇವನ್ ಪಿ.ಜೇವೂರ್,ಎಂಟರಟೈನಮೆಂಟ್‌ ಬ್ಯೂರೋ,ಪಬ್ಲಿಕ್ ನೆಕ್ಸ್ಟ್‌

Edited By : Manjunath H D
PublicNext

PublicNext

04/05/2022 03:58 pm

Cinque Terre

70.27 K

Cinque Terre

0