ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಟ ಧನುಷ್ ನಮ್ಮ ಮಗ ಅಂತ ಹೈಕೋರ್ಟ್ ಮೊರೆ ಹೋದ ವೃದ್ಧ ದಂಪತಿಗಳು

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಮಾಜಿ ಅಳಿಯ ನಟ ಧನುಷ್ ವಿರುದ್ಧ ಈಗ ಚೆನ್ನೈ ಹೈಕೋರ್ಟ್ ಸಮನ್ಸ್ ಜಾರಿಗೊಳಿಸಿದೆ. ಈ ಸಮನ್ಸ್ ಹಿಂದೆ ಒಂದು ಬಲವಾದ ಕಾರಣವೂ ಇದೆ. ಬನ್ನಿ, ಹೇಳುತ್ತೇವೆ.

ಸ್ಟಾರ್ ನಟ ಧನುಷ್ ತಮ್ಮ ಪುತ್ರ ಎಂದು ವೃದ್ಧ ದಂಪತಿಗಳು ಕೋರ್ಟ್ ಮೆಟ್ಟಿಲೇರಿದ್ದಾರೆ. ಕಳೆದ 6 ವರ್ಷದ ಹಿಂದೆ ಮೆಲೂರ್ ಜಿಲ್ಲಾ ಮೆಜಿಸ್ಟ್ರೇಟ್ ನ್ಯಾಯಾಲಯದ ಮೊರೆ ಹೋಗಿದ್ದರು. ಸ್ಟಾರ್ ನಟ ಧನುಷ್ ನಮ್ಮ ಪುತ್ರ. ಈಗ ನಮಗೆ ಜೀವನ ನಿರ್ವಹಿಸಲು ಆಗುತ್ತಿಲ್ಲ. ಪ್ರತಿ ತಿಂಗಳು 65 ಸಾವಿರ ರೂಪಾಯಿ ನೀಡಬೇಕೆಂದು ಮನವಿ ಮಾಡಿದ್ದರು.

ಈ ಮನವಿಯನ್ನ ಕೋರ್ಟ್ ಪರಿಗಣಿಸಿತ್ತು. ಪರಿಶೀಲನೆಗೂ ಆದೇಶ ನೀಡಿತ್ತು. ಆಗ ವೃದ್ಧ ದಂಪತಿಗಳು ಸಲ್ಲಿಸಿದ ದಾಖಲೆಗಳೆಲ್ಲ ಸುಳ್ಳು ಅಂತಲೇ ಗೊತ್ತಾಯಿತು. ಕೋರ್ಟ್ ಕೇಸ್ ಅನ್ನ ರದ್ದುಗೊಳಿಸಿತ್ತು. ಆದರೆ ಈಗ ಇದೇ ವೃದ್ಧ ದಂಪತಿಗಳು ಮತ್ತೆ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಹಿಂದಿನ ಕೋರ್ಟ್ ಆದೇಶವನ್ನ ರದ್ದುಗೊಳಿಸಬೇಕು ಎಂದು ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇದರ ಪರಿಣಾಮ ಧನುಷ್ಯ ಗೆ ಈಗ ಸಮನ್ಸ್ ಬಂದಿದೆ.

Edited By :
PublicNext

PublicNext

04/05/2022 09:52 am

Cinque Terre

50.36 K

Cinque Terre

31