ಮೂತ್ರಪಿಂಡದ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ನಟ ಮಿಥುನ್ ಚಕ್ರವರ್ತಿ ಆಸ್ಪತ್ರೆ ಫೋಟೋ ವೈರಲ್ ಆಗಿದ್ದು ಅಭಿಮಾನಿಗಳು ಆತಂಕಗೊಂಡಿದ್ದಾರೆ. ಈ ಬಗ್ಗೆ ಮಿಥುನ್ ಚಕ್ರವರ್ತಿ ಮಗ ವಿಮೋಹ್ ಆಸ್ಪತ್ರೆ ಫೋಟೋ ಇದಾಗಿದೆ ಯಾರು ಗಾಬರಿಯಾಗಬೇಡಿ ಸದ್ಯ ನನ್ನ ತಂದೆ ಚೇತರಿಸಿಕೊಂಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
71 ವರ್ಷದ ನಟ ಮಿಥುನ್ ಚಕ್ರವರ್ತಿ ಇತ್ತೀಚೆಗೆ ಮೂತ್ರಪಿಂಡದ ಸಮಸ್ಯೆಯಿಂದಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದರು.
ದಿ ಕಾಶ್ಮೀರಿ ಫೈಲ್ಸ್ ಸಿನಿಮಾದಲ್ಲಿ ಮನೋಜ್ಞ ಅಭಿನಯದಿಂದ ಮತ್ತಷ್ಟು ಅಭಿಮಾನಿಗಳನ್ನುಗಳಿಸಿರುವ ಬಾಲಿವುಡ್ ದಾದಾನ ಚೇತರಿಕೆಗೆ ಹಲವರು ಹಾರೈಸಿದ್ದಾರೆ.
PublicNext
02/05/2022 10:43 pm