ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ಯಾಂಡಲ್‌ವುಡ್ ನಲ್ಲಿ ಮತ್ತೆ ಶುರು ಆಯಿತೇ 4 ನೇ ಅಲೆ ಆತಂಕ ?

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಮತ್ತೆ ಶುರು ಆಗಿದೆ ಆತಂಕ. ಆದರೆ, ಈ ಆತಂಕಕ್ಕೆ ಕಾರಣ ಹೊಸದೇನೂ ಅಲ್ಲ. ಅದೇ ಹಳೆ ಕೊರೊನಾ ಮತ್ತೆ ಆತಂಕ ಮೂಡಿಸುತ್ತಿದೆ.

ಕೊರೊನಾ ನಾಲ್ಕನೆ ಅಲೆ ಬರ್ತಾಯಿದೆ. ಮತ್ತೆ ಥಿಯೇಟರ್‌ ನಲ್ಲಿ 100 ಜನರ ಬದಲು, 50 ಜನರು ಮಾತ್ರ ಚಿತ್ರ ನೋಡಬೇಕು ಅನ್ನೋ ನಿಯಮ ಜಾರಿಗೆ ಬರುತ್ತದೆ ಅನ್ನೋ ಮಾತು ಈಗ ಬಲವಾಗಿಯೆ ಕೇಳಿ ಬರುತ್ತಿದೆ.

ಒಂದು ವೇಳೆ ಮತ್ತೆ ಚಿತ್ರ ಪ್ರದರ್ಶನಕ್ಕೆ ಶೇಕಡ 50 ರಷ್ಟು ಆಕ್ಯುಪೆನ್ಸಿ ಜಾರಿಗೆ ಬಂದ್ರೆ ಮುಗಿದೆ ಹೋಯಿತು. ರಿಲೀಸ್ ಗೆ ಕಾದಿರೋ ಸಾಲು ಸಾಲು ಚಿತ್ರಗಳು ಸಂಕಷ್ಟಕ್ಕೆ ಸಿಲುಕಲಿವೆ ಅಂತಲೇ ಇಂಡಸ್ಟ್ರೀಯಲ್ಲಿ ಚರ್ಚೆ ಆಗುತ್ತಿದೆ.

Edited By :
PublicNext

PublicNext

02/05/2022 02:49 pm

Cinque Terre

63.46 K

Cinque Terre

2