ಮುಂಬೈ: ವಯಸ್ಸು 46 ಆದರೂ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಯುವತಿಯರು ನಾಚುವಂತೆ ಫಿಟ್ ಆಗಿದ್ದಾರೆ. ತಮ್ಮ ಈ ಸೌಂದರ್ಯದ ಗುಟ್ಟು ವ್ಯಾಯಾಮ, ಆಹಾರ ಕಾಳಜಿ ಎಂಬುದು ಅನೇಕ ಬಾರಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಫಿಟ್ನೆಸ್ ಹಾಗೂ ಫುಡ್ ಹ್ಯಾಬಿಟ್ಗಳ ಕುರಿತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಶಿಲ್ಪಾ ಶೆಟ್ಟಿ ಇಂದು ಬಸ್‌ನಲ್ಲಿ ಪ್ರಯಾಣಿಸುತ್ತಿರುವ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಾವು ಚಲಿಸುತ್ತಿದ್ದ ಬಸ್ ಖಾಲಿ ಇತ್ತು ಎಂದು ಅವರು ಅಲ್ಲಿಯೂ ವ್ಯಾಯಾಮ ಮಾಡಿ ಸೈ ಎನಿಸಿಕೊಂಡಿದ್ದಾರೆ. ಜೊತೆಗೆ 'ಇಂದು ಮನೆಗೆ ಮರಳುವ ವೇಳೆ ಬಸ್ ಖಾಲಿ ಇತ್ತು. ಹೀಗಾಗಿ ಒಂದಷ್ಟು ಪುಷ್ ಅಪ್ಸ್, ಪುಲ್ ಅಪ್ಸ್ ಮಾಡಿದೆ. ಮಿಷನ್ಸ್ ಅಕಂಪ್ಲಿಷ್ಡ್. ಫಿಟ್ ಇಂಡಿಯಾ ಹಾಗೂ ಸ್ವಚ್ಛ ಭಾರತ ಅಭಿಯಾನ' ಎಂದು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
PublicNext
02/05/2022 12:58 pm