ಬೆಂಗಳೂರು: ಬಾಲಿವುಡ್ ನಾಯಕಿ ನಟಿ ಶಿಲ್ಪಾ ಶೆಟ್ಟಿ ಮೇಲೂ ಕೆಜಿಎಫ್-2 ಚಿತ್ರದ ವೈಲೆನ್ಸ್ ಡೈಲಾಗ್ ಸಿಕ್ಕಾಪಟ್ಟೆ ಪ್ರಭಾವ ಬೀರಿದೆ. ರಾಕಿಂಗ್ ಸ್ಟಾರ್ ಯಶ್ ಹೇಳಿದ ಆ ಡೈಲಾಗ್ ಅನ್ನ ಅಷ್ಟೇ ಖುಷಿಯಿಂದಲೇ ಶೀಲ್ಪಾ ಶೆಟ್ಟಿ ಹೇಳಿದ್ದಾರೆ. ಆ ಒಂದು ವೀಡಿಯೋ ಈಗ ವೈರಲ್ ಆಗುತ್ತಿದೆ.
ಕೆಜಿಎಫ್-2 ಚಿತ್ರದ ಮೋಡಿ ಅಂತಿಂತ ಮೋಡಿ ಅಲ್ಲ ಬಿಡಿ. ಈ ಚಿತ್ರದ ಪ್ರತಿ ಸೀನ್ ಪ್ರತಿ ಡೈಲಾಗ್ ವೈರಲ್ ಆಗುತ್ತಿವೆ. ಬಾಲಿವುಡ್ ನಲ್ಲೂ ಈ ಚಿತ್ರದ ಹವಾ ದೊಡ್ಡ ಮಟ್ಟದಲ್ಲಿಯೇ ಬೀಸುತ್ತಿದೆ.
ಈ ಚಿತ್ರದ ಕ್ರೇಜ್ ಜನರಿಗಷ್ಟೇ ಅಲ್ಲ, ಸೆಲೆಬ್ರಿಟಿಗಳಿಗೂ ಇಷ್ಟ ಆಗುತ್ತಿದೆ. ಅದರಲ್ಲಿ ಶಿಲ್ಪಾ ಶೆಟ್ಟಿ ಕೂಡ ಒಬ್ಬರು. ಯಶ್ ಚಿತ್ರದಲ್ಲಿ ಹೇಳಿರೋ ಆ ವೈಲೆನ್ಸ್ ಡೈಲಾಗ್ ಅನ್ನ ಶಿಲ್ಪಾ ಶೆಟ್ಟಿ ಕೂಡ ಹೇಳಿ ಖುಷಿಪಟ್ಟಿದ್ದಾರೆ. ಅಷ್ಟೆ ಎಂಜಾಯ್ ಕೂಡ ಮಾಡಿದ್ದಾರೆ. ಆ ವೀಡಿಯೋ ಈಗ ಹೆಚ್ಚು ಗಮನ ಸೆಳೆಯುತ್ತಿದೆ.
PublicNext
28/04/2022 06:00 pm