ನಿನ್ನೆ ಸ್ಟಾರ್ ನಟರ ನಡುವೆ ನಡೆದ ಟ್ವೀಟರ್ ವಾರ್ ಗೆ ಸಂಬಂಧಿಸಿದಂತೆ ಬಾಲಿವುಡ್ ನಟ ಅಜಯ್ ದೇವಗನೆ ವಿರುದ್ಧ ಮೋಹಕ ತಾರೆ ರಮ್ಯಾ ಗುಡುಗಿದ್ದಾರೆ. ಹಿಂದಿ ಹೇರಿಕೆ ನಿಲ್ಲಿಸಿ, ನಿಮ್ಮ ಸಿನಿಮಾ ನಾವ್ ನೋಡಿದ್ವಿ, ಈಗ ನೀವ್ ನೋಡಿ ಎಂದು ಟ್ವೀಟ್ ಮಾಡಿದ್ದಾರೆ. ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ ಎಂದು ಸ್ಯಾಂಡಲ್ವುಡ್ ಕ್ವೀನ್ ನಟಿ ರಮ್ಯಾ ದೇವನಗ್ ವಿರುದ್ಧ ಗರಂ ಆಗಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರೋ ರಮ್ಯಾ, ನಿಮ್ಮ ನಿರ್ಲಕ್ಷ್ಯ ನನ್ನನ್ನು ದಿಗ್ಭ್ರಮೆಗೊಳಿಸುತ್ತಿದೆ. ಪುಷ್ಪಾ, ಕೆಜಿಎಫ್ 2, ಆರ್ ಆರ್ ಆರ್ ಸಿನಿಮಾ ಹಿಂದಿ ಬೆಲ್ಟ್ ನಲ್ಲಿ ಭಾರೀ ಕಲೆಕ್ಷನ್ ಮಾಡಿದೆ. ಕಲೆಗೆ ಭಾಷೆಯ ಗಡಿಯಿಲ್ಲ. ಹಿಂದಿ ಹೇರಿಕೆ ನಿಲ್ಲಿಸಿ. ಇಷ್ಟು ದಿನ ನಾವು ಹೇಗೆ ನಿಮ್ಮ ಸಿನಿಮಾಗಳನ್ನು ಎಂಜಾಯ್ ಮಾಡುತ್ತೇವೋ, ಹಾಗೆಯೇ ನೀವು ನಮ್ಮ ಸಿನಿಮಾಗಳನ್ನು ಎಂಜಾಯ್ ಮಾಡಿ ಎಂದು ಕೌಂಟರ್ ಮಾಡಿದ್ದಾರೆ.
ಈ ಹಿಂದೆ ಹಿಂದಿ ರಾಷ್ಟ್ರ ಭಾಷೆಯಲ್ಲ ಅಂದಮೇಲೆ ಕನ್ನಡ ಸಿನಿಮಾ ಏಕೆ ಡಬ್ ಮಾಡಿ ರಿಲೀಸ್ ಮಾಡುತ್ತೀರಿ ಎಂದು ಅಜಯ್ ದೇವಗನ್ ಸುದೀಪ್ ಅವರಿಗೆ ಪ್ರಶ್ನಿಸಿದ್ದರು.
PublicNext
28/04/2022 08:01 am