ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಪ್ಪು ಅರಿತ ಅಜಯ್ : ‘ರಾಷ್ಟ್ರ ಭಾಷೆ’ ವಿವಾದಕ್ಕೆ ಫುಲ್ ಸ್ಟಾಪ್!

ಕಿಚ್ಚ ಸುದೀಪ್ ಹಾಗೂ ಅಜಯ್ ದೇವಗನ್ ನಡುವಿನ ‘ರಾಷ್ಟ್ರ ಭಾಷೆ’ ವಿವಾದದ ಟ್ವೀಟ್ ವಾರ್ ಸದ್ಯ ತಣ್ಣಗಾಗಿದೆ. ಕಿಚ್ಚ ಸುದೀಪ್ ಪ್ರತಿಕ್ರಿಯೆ ಕೊಟ್ಟ ಮೇಲೆ, ‘’ಅನುವಾದದಲ್ಲಿ ಏನೋ ತಪ್ಪಾಗಿದೆ’’ ಎಂದು ಅಜಯ್ ದೇವಗನ್ ವಿವಾದಕ್ಕೆ ತೆರೆ ಎಳೆಯುವ ಕೆಲಸ ಮಾಡಿದ್ದಾರೆ.

‘’ಹಾಯ್ ಕಿಚ್ಚ ಸುದೀಪ್.. ನೀವು ನನ್ನ ಸ್ನೇಹಿತ. ತಪ್ಪು ತಿಳುವಳಿಕೆಯನ್ನು ಸರಿ ಪಡಿಸಿದ್ದಕ್ಕಾಗಿ ಧನ್ಯವಾದಗಳು. ಫಿಲ್ಮ್ ಇಂಡಸ್ಟ್ರಿ ಒಂದೇ ಎಂದು ಯಾವಾಗಲೂ ನಂಬಿರುವವನು ನಾನು. ನಾವು ಎಲ್ಲಾ ಭಾಷೆಗಳನ್ನು ಗೌರವಿಸುತ್ತೇವೆ. ಹಾಗೇ, ನಮ್ಮ ಭಾಷೆಯನ್ನೂ ಇತರರು ಗೌರವಿಸಬೇಕು ಎಂದು ಭಾವಿಸುತ್ತೇವೆ. ಬಹುಶಃ.. ಅನುವಾದದಲ್ಲಿ ಏನೋ ತಪ್ಪಾಗಿರುವ ಹಾಗಿದೆ’’ ಎಂದು ಅಜಯ್ ದೇವಗನ್ ಟ್ವೀಟ್ ಮಾಡಿದ್ದಾರೆ.

Edited By : Nirmala Aralikatti
PublicNext

PublicNext

27/04/2022 08:01 pm

Cinque Terre

101.56 K

Cinque Terre

2