ಬೆಂಗಳೂರು: ಪವರ್ ಸ್ಟಾರ್ ಚಿತ್ರಗಳ ಮೂಲಕವೇ ಕನ್ನಡ ಇಂಡಸ್ಟ್ರೀಗೆ ಕಾಲಿಟ್ಟ ಹೊಂಬಾಳೆ ಫಿಲಮ್ಸ್ ಈಗ ಯುವರಾಜ್ ಕುಮಾರ್ ಅನ್ನ ಲಾಂಚ್ ಮಾಡಲು ನಿರ್ಧರಿಸಿದೆ. ಈ ದಿನ ಚಿತ್ರದ ಫಸ್ಟ್ ಲುಕ್ ಅನ್ನ ಕೂಡ ರಿಲೀಸ್ ಮಾಡಲಾಗಿದೆ. ಅಂದ್ಹಾಗೆ ಈ ಚಿತ್ರದ ಒಂದಷ್ಟು ಡಿಟೈಲ್ಸ್ ಕೂಡ ರಿವೀಲ್ ಆಗಿದೆ. ಬನ್ನಿ, ಹೇಳ್ತಿವಿ.
ರಾಘವೇಂದ್ರ ರಾಜಕುಮಾರ್ ಪುತ್ರ ಯುವರಾಜ್ ಕುಮಾರ್ ಕೊನೆಗೂ ಲಾಂಚ್ ಆಗುತ್ತಿದ್ದಾರೆ. ಈ ಲಾಂಚಿಂಗ್ ಜವಾಬ್ದಾರಿಯನ್ನ ಹೊಂಬಾಳೆ ಫಿಲ್ಮಮ್ಸ್ ಹೊತ್ತು ಕೊಂಡಿದೆ. ಪುನೀತ್ ರಾಜಕುಮಾರ್ ಚಿತ್ರಗಳನ್ನ ನಿರ್ಮಿಸಿ ಗೆದ್ದ ಈ ಸಂಸ್ಥೆ ಕೆಜಿಎಫ್ ಚಿತ್ರವನ್ನೂ ನಿರ್ಮಿಸಿ ಗೆಲುವಿನ ಉತ್ತುಂಗದಲ್ಲಿಯೇ ಇದೆ.
ಪುನೀತ್ ಅಭಿನಯದ ಬಿಗ್ ಹಿಟ್ 'ರಾಜಕುಮಾರ್' ಚಿತ್ರವನ್ನೂ ಇದೇ ಸಂಸ್ಥೆ ನಿರ್ಮಿಸಿತ್ತು. ಈಗ ಇದೇ ಚಿತ್ರದ ನಿರ್ದೇಶ ಸಂತೋಷ್ ಆನಂದ್ ರಾಮ್,ಯುವರಾಜಕುಮಾರ್ ಮೊದಲ ಚಿತ್ರವನ್ನೂ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಆದರೆ, ಇದೊಂದು ಕಾಲೇಜು ಪ್ರೇಮ ಕಥೆಯ ಚಿತ್ರವೇ ಆಗಿದೆ. ವಿಶೇಷವಾಗಿ ಇದರಲ್ಲೂ ಭರ್ಜರಿ ಆಕ್ಷನ್ ಇರಲಿವೆ ಅನ್ನೋ ಮಾಹಿತಿ ಹೊರ ಬಿದ್ದಿದೆ. ಉಳಿದಂತೆ ಸದ್ಯಕ್ಕೆ ಈ ಚಿತ್ರದ ನಾಯಕ ಯುವರಾಕುಮಾರ್ ಗೆ ಇಂಡಸ್ಟ್ರೀಯ ಎಲ್ಲರೂ ಗುಡ್ ಲಕ್ ಹೇಳ್ತಿದ್ದಾರೆ.
ಅಂದ್ಹಾಗೆ ಯುವರಾಜ್ ಕುಮಾರ್ ಅಭಿನಯದ ಮೊದಲ ಚಿತ್ರ ರಣಧೀರ ಕಂಠೀರವ. ಇದು ಕಾರಣಾಂತರದಿಂದಲೇ ನಿಂತು ಹೋಗಿದೆ. ಅಲ್ಲಿಗೆ ಹೊಂಬಾಳೆ ಸಂಸ್ಥೆ ನಿರ್ಮಿಸ್ತಿರೋ ಈ ಚಿತ್ರವೇ ಮೊದಲ ಚಿತ್ರ ಆಗಲಿದೆ.
-ರೇವನ್ ಪಿ.ಜೇವೂರ್,ಎಂಟರಟೈನಮೆಂಟ್ ಬ್ಯೂರೋ,ಪಬ್ಲಿಕ್ ನೆಕ್ಸ್ಟ್
PublicNext
27/04/2022 03:13 pm