ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2 ಚಿತ್ರದ ಬಗ್ಗೆ ಪರ-ವಿರೋಧ ಚರ್ಚೆಗಳ ಇದ್ದೇ ಇವೆ. ಸಾಹಿತಿ ಹಾಗೂ ಅಹೋರಾತ್ರ ಈಗ ಕೆಜಿಎಫ್-2 ಚಿತ್ರದ ಬಗಗೆ ಕಠೋವಾಗಿಯೇ ಟೀಕೆ ಮಾಡಿದ್ದಾರೆ. ಇದನ್ನ ಕೇಳಿದ ಯಶ್ ಅಭಿಮಾನಿಗಳು ಕೆಂಡಾಮಂಡಲವಾಗಿದ್ದಾರೆ. ಆ ಒಂದು ಆಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಹೌದು. ಅಹೋರಾತ್ರ ಕಠೋರವಾಗಿಯೇ ಟೀಕಿಸುತ್ತಾರೆ. ಅದನ್ನ ಕೇಳಿದ ಯಶ್ ಅಭಿಮಾನಿಯೊಬ್ಬರು ಸರಿಯಾಗಿಯೇ ರಿಯಾಕ್ಟ್ ಮಾಡಿದ್ದಾರೆ. ಅದಕ್ಕೆ ಕುಗ್ಗದ ಅಹೋರಾತ್ರ ಕತ್ತೆ ಅಂತಲೂ ಆ ಅಭಿಮಾನಿಗೆ ಬೈದಿದ್ದಾರೆ.
ಆದರೂ ಅಹೋರಾತ್ರ ಕಟು ಟೀಕೆ ನಿಲ್ಲಿಸಿಯೇ ಇಲ್ಲ. ರಾಯಚೂರಿನ ಅಭಿಮಾನಿ ಮಾತುಗಳನ್ನ ಕೇಳುತ್ತಲೇ, ಚಿತ್ರದಲ್ಲಿ ನಾಯಕ ಬೀಡಿಸಿ ಸೇದುತ್ತಾನೆ. ನಿನ್ನ ಮಗನೂ ಹಾಗೆ ಮಾಡ್ತುತ್ತಾನೆ. ಯಾರಿಗಾದ್ರೂ ಗುಂಡು ಹಾಕುತ್ತಾನೆ. ಆಗ ಏನ್ ಮಾಡ್ತಿಯೋ ಅಂತಲೇ ಕೇಳ್ತಾನೆ. ಹೀಗೆ ಅತ್ತ ಅಭಿಮಾನಿ ಇತ್ತ ಅಹೋರಾತ್ರ ಮಾತಿನ-ಚಕಮಕಿ ಆಡಿಯೋ ಎಲ್ಲರ ಗಮನ ಸೆಳೆಯುತ್ತಲೇ ಇದೆ.
PublicNext
26/04/2022 07:24 pm