ಬೆಂಗಳೂರು: ಡಾಕ್ಟರ್ ರಾಜ್ ಮೊಮ್ಮಗಳು ಧನ್ಯ ರಾಮ್ ಕುಮಾರ್ ವಿಶೇಷವಾಗಿಯೇ ತಾತನನ್ನ ನೆನೆದಿದ್ದಾರೆ. ಮಾಮ ಪುನೀತ್ ಅವರನ್ನೂ ಈ ಕ್ಷಣ ನೆನಪಿಸಿಕೊಳ್ಳಲು ಕೂಡ ಮರೆತೇ ಇಲ್ಲ. ಇಬ್ಬರನ್ನೂ ಅವರವರ ಹಾಡುಗಳನ್ನ ಹಾಡುವ ಮೂಲಕ ನೆನಪಿಸಿಕೊಂಡಿರೋದು ವಿಶೇಷ. ಬನ್ನಿ, ನೋಡೋಣ.
ಧನ್ಯ ರಾಮ್ ಕುಮಾರ್ ತಾತಾ ರಾಜ್ ಕುಮಾರ್ ಅವರ ಹುಟ್ಟುಹಬ್ಬಕ್ಕೆಂದೇ ವಿಶೇಷವಾಗಿಯೇ ಹಾಡುಗಳನ್ನ ಹಾಡಿದ್ದಾರೆ. ಪುನೀತ್ ಹಾಡಿನರೋ ಹಾಡನ್ನೂ ಹಾಡಿರೋದು ವಿಶೇಷ.
ತಂಗಿಯ ಈ ಒಂದು ವಿಶೇಷ ಅರ್ಪಣೆಯನ್ನ ಸಹೋದರ ಧೀರೇನ್ ರಾಮ್ ಕುಮಾರ್ ಶೇರ್ ಮಾಡಿದ್ದಾರೆ. , ‘ತಾತ ಮತ್ತು ಮಾಮಾ ಅವರಿಗೆ ಒಂದು ಸಣ್ಣ ಅರ್ಪಣೆ’ ಅಂತಲೂ ಬರೆದುಕೊಂಡು ತಮ್ಮ ಮನದ ಮಾತುಗಳನ್ನ ಹೇಳಿಕೊಂಡಿದ್ದಾರೆ.
PublicNext
26/04/2022 07:21 pm