ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಯಾನಕ ಅನುಭವ ಬಿಚ್ಚಿಟ್ಟ ಕಂಗನಾ : ಬಾಲ್ಯದಲ್ಲಿಯೇ ಲೈಂಗಿಕ ಕಿರುಕುಳ

‘ಲಾಕಪ್’ ರಿಯಾಲಿಟಿ ಶೋ ನಿರೂಪಣೆ ಮೂಲಕ ಕಿರುತೆರಯಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿರುವ ಬಾಲಿವುಡ್ ನಟಿ ಕಂಗನಾ ತಮ್ಮ ನಿರೂಪಣೆಯನ್ನು ಮೆಚ್ಚಿಕೊಂಡಿದ್ದಾರೆ. ಇನ್ನು ‘ಲಾಕಪ್’ ರಿಯಾಲಿಟಿ ಶೋ ನಲ್ಲಿ ಅನೇಕ ವಿಚಾರಗಳು ಬಹಿರಂಗಗೊಂಡಿವೆ. ಕಂಗನಾ 11ನೇ ವಯಸ್ಸಿಗೆ ತಮಗಾದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಿದ್ದಾರೆ. ಈ ವಿಚಾರ ಕೇಳಿ ಸ್ಪರ್ಧಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.

‘ಪ್ರತಿ ವರ್ಷ ಹಲವಾರು ಮಕ್ಕಳು ಈ ರೀತಿಯ ಕಿರುಕುಳಕ್ಕೆ ಒಳಗಾಗುತ್ತಾರೆ. ಆದರೆ ಅದನ್ನು ಸಾರ್ವಜನಿಕವಾಗಿ ಮಾತನಾಡಲು ಹಿಂಜರಿಯುತ್ತಾರೆ. ನಾನೂ ಇದನ್ನು ಎದುರಿಸಿದ್ದೇನೆ. ನಾನು ಚಿಕ್ಕವಳಾಗಿದ್ದೆ. ನಮ್ಮ ಊರಿನ ಒಬ್ಬ ಹುಡುಗ ನನ್ನನ್ನು ಕೆಟ್ಟ ರೀತಿಯಲ್ಲಿ ಸ್ಪರ್ಶಿಸುತ್ತಿದ್ದ.

ನನ್ನನ್ನು ಮುಟ್ಟುತ್ತಿದ್ದ ಬಾಲಕ ನನಗಿಂತ ಮೂರರಿಂದ ನಾಲ್ಕು ವರ್ಷ ದೊಡ್ಡವನಾಗಿದ್ದ. ಅವನು ಲೈಂಗಿಕ ಆಸಕ್ತನಾಗಿದ್ದ ಅನಿಸುತ್ತದೆ. ನಮ್ಮನ್ನು ಕರೆದು ಬಟ್ಟೆ ಬಿಚ್ಚಿಸಿ, ತಪಾಸಣೆ ಮಾಡುತ್ತಿದ್ದ. ಆ ಸಮಯದಲ್ಲಿ ಇದರ ಅರ್ಥವೇನೆಂದು ನನಗೆ ತಿಳಿದಿರಲಿಲ್ಲ. ನಿಮ್ಮ ಕುಟುಂಬವು ಎಷ್ಟೇ ಎಚ್ಚರಿಕೆ ತೆಗೆದುಕೊಳ್ಳುತ್ತದೆ ಎಂದರೂ ಈ ರೀತಿಯ ಅನುಭವ ಆಗುತ್ತದೆ’ ಈ ರೀತಿಯ ಘಟನೆಗಳಿಂದ ಮಕ್ಕಳು ಮಾನಸಿಕವಾಗಿ ಆಘಾತಕ್ಕೊಳಗಾಗುತ್ತಾರೆ ಎಂದಿದ್ದಾರೆ ಕಂಗನಾ.

Edited By : Nirmala Aralikatti
PublicNext

PublicNext

25/04/2022 03:09 pm

Cinque Terre

58.59 K

Cinque Terre

5

ಸಂಬಂಧಿತ ಸುದ್ದಿ