ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕನ್ನಡದ ನಾಯಕ ನಟ ಡಾಲಿ ಧನಂಜಯ್ ಜೆಡಿಎಸ್ ಸೇರ್ತಾರಾ ?

ಬೆಂಗಳೂರು: ಕನ್ನಡದ ನಾಯಕ ನಟ ಡಾಲಿ ಧನಂಜಯ್ ರಾಜಕೀಯಕ್ಕೆ ಕಾಲಿಡ್ತಾಯಿದ್ದಾರಾ ? ಅರಸಿಕೆರೆ ಅಭ್ಯರ್ಥಿಯಾಗಿ ಜೆಡಿಎಸ್ ನಿಂದ ಶಿವಲಿಂಗೇ ಗೌಡರ ಬದಲು ಡಾಲಿ ಧನಂಜಯ್ ನಿಲ್ತಾರಂತೇ. ಹೌದು..? ಈ ಎಲ್ಲ ಹೌದುಗಳಿಗೆ ಸ್ವತಃ ಧನಂಜಯ್ ಉತ್ತರ ಕೊಟ್ಟಿದ್ದಾರೆ. ಬನ್ನಿ, ಹೇಳ್ತೀವಿ.

ಧನಂಜಯ್ ತಮ್ಮ ಫೇಸ್ ಬುಕ್ ಅಕೌಂಟ್‌ ನಲ್ಲಿಯೇ ಈ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಬರೆದುಕೊಂಡಿದ್ದು. ರಾಜಕೀಯಕ್ಕೆ ನಾನು ಕಾಲಿ ಇಡ್ತಿಲ್ಲ ಅನ್ನೋದನ್ನೆ ಇಲ್ಲಿ ಹೇಳಿದ್ದಾರೆ. ಅವರೇ ಬರೆದುಕೊಂಡ ಆ ಸಾಲುಗಳು ಹಿಂಗಿವೆ ಓದಿ.

"ನಾನು shooting ಅಲ್ಲಿ ಎಷ್ಟು ಮುಳುಗಿ ಹೋಗಿದಿನಿ ಅಂದ್ರೆ ನನಗೆ ಈ ತರ ಒಂದು news ಆಗಿದೆ ಅನ್ನೋದೆ ಗೊತ್ತಾಗಿರಲಿಲ್ಲ. ಈ ವಿಷಯಕ್ಕೂ ನನಗೂ , ರಾಜಕೀಯಕ್ಕು ನನಗೂ ಯಾವುದೆ ಸಂಬಂಧ ಇಲ್ಲ. ಕಲಾವಿದನಾಗಿ ಜನ ಸ್ವೀಕರಿಸಿ ಅಪ್ಪಿದ್ದಾರೆ. ನೂರಾರು ಪಾತ್ರಗಳ ಮೂಲಕ ಅಭಿಮಾನಿ ದೇವರುಗಳ ರಂಜಿಸುವ ಕೆಲಸವಷ್ಟೆ ನನ್ನದು. ಸುಮ್ನೆ ಏನೇನೊ ಸುದ್ದಿ ಬರೆಯೋದು, ತೋರಿಸೋದು, ಕೇಳೋದು, ನೋಡೋದು, ನಂಬೋದು, ಎಲ್ಲ ಬಿಟ್ಟು, ನಡೀರಿ ಏನಾರ ಒಂದಿಷ್ಟು ಒಳ್ಳೆ ಕೆಲಸ ಮಾಡನ"

ಹೀಗೆ ಧನಂಜಯ್ ರಾಜಕೀಯ ಬದಲು ಸಿನಿಮಾನೇ ನನಗೆ ಹೆಚ್ಚು. ಅದುವೇ ನನ್ನ ಪ್ರೀತಿ. ರಾಜಕೀಯ ಅಲ್ಲವೇ ಅಲ್ಲ ಅಂತಲೇ ಹೇಳಿಕೊಂಡಿದ್ದಾರೆ.

-ರೇವನ್ ಪಿ.ಜೇವೂರ್,ಎಂಟರಟೈನಮೆಂಟ್‌ ಬ್ಯೂರೋ,ಪಬ್ಲಿಕ್ ನೆಕ್ಸ್ಟ್

Edited By :
PublicNext

PublicNext

23/04/2022 04:39 pm

Cinque Terre

70.41 K

Cinque Terre

2