ಗೋವಾ: ರಾಕಿಂಗ್ ಸ್ಟಾರ್ ಯಶ್ ಸದ್ಯ ರಿಯಾಕ್ಸ್ ಮೂಡ್ ನಲ್ಲಿಯೇ ಇದ್ದಾರೆ. ಕೆಜಿಎಫ್-2 ಗೆಲುವಿನ ಅಲೆಯಲ್ಲಿಯೇ ಇರೋ ಯಶ್ ಸದ್ಯ ಗೋವಾದಲ್ಲಿಯೇ ಕ್ವಾಲಿಟಿ ಟೈಮ್ ಅನ್ನ ಫ್ಯಾಮಿಲಿ ಜೊತೆಗೆ ಕಳೆಯುತ್ತಿದ್ದಾರೆ.
ಗೋವಾ ಅನ್ನೋದು ಯಶ್ ಫ್ಯಾಮಿಲಿಗೆ ಹೊಸದೇನೂ ಅಲ್ಲ ಬಿಡಿ. ರಾಧಿಕಾ ಮತ್ತು ಯಶ್ ಇಲ್ಲಿಯೇ ತಮ್ಮ ನಿಶ್ಚಿತಾರ್ಥವನ್ನ ಮಾಡಿಕೊಂಡಿದ್ದರು. ಅದಂತೆ ರಾಧಿಕಾ ಅಜ್ಜಿ ಮನೆನೂ ಇಲ್ಲಿಯೇ ಇದೆ.
ಇದರ ಹೊರತಾಗಿ ಆಗಾಗ ಇಲ್ಲಿಗೆ ಬರೋ ರಾಧಿಕಾ ಹಾಗೂ ಯಶ್ ಸದ್ಯ ಮಕ್ಕಳೊಟ್ಟಿಗೆ ಇಲ್ಲಿಗೆ ಆಗಮಿಸಿದ್ದಾರೆ. ಕಡಲ ತೀರದಲ್ಲಿ ಸುಮಾರು ಹೊತ್ತು ಮಕ್ಕಳ ಜೊತೆಗೆ ಕಳೆದಿದ್ದಾರೆ. ಆ ಫೋಟೋಗಳೂ ಈಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಗಮನ ಸೆಳೆಯುತ್ತಿವೆ.
PublicNext
23/04/2022 12:28 pm